ಬೆಂಗಳೂರಿನಲ್ಲಿ : ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನಾವು-ನೀವು ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆಗೆ ಆಹ್ವಾನ

ಕಾರ್ಯಕ್ರಮ : ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣ

ಪುಸ್ತಕದ ಶೀರ್ಷಿಕೆ : ಸಂವಿಧಾನದ ಕಾಲಾಳು ತೀಸ್ತಾ ಸೆತಲ್ವಾಡ್ ನೆನೆಪುಗಳು

ನಡೆಸಿಕೊಡುವವರು : ಕ್ರಿಯಾ ಮಾಧ್ಯಮ ಪ್ರೈ ಲಿಮಿಟೆಡ್, ಸೈಂಟ್ ಜೊಸೆಫ್ಸ್ ಕಾಲೇಜು

ಉಪಸ್ಥಿತಿ : ಪ್ರೊ.ಬಿ.ಕೆ.ಚಂದ್ರಶೇಖರ್, ಶಿವಸುಂದರ್, ತೀಸ್ತಾ ಸೆತಲ್ವಾಡ್, ಪ್ರೊ.ಮುಸಫರ್ ಅಸಾದಿ, ಸತ್ಯಾ ಎಸ್ ಮತ್ತು ನಾವು ನೀವು

ಸ್ಥಳ : ಕ್ಸೇವಿಯರ್ ಹಾಲ್, ಸೈಂಟ್ ಜೊಸೆಫ್ಸ್ ಕಾಲೇಜು, ಪಿ ಜಿ ಬ್ಲಾಕ್, ಶಾಂತಿನಗರ, ಬೆಂಗಳೂರು

ಸಮಯ : ಮೇ 18, 2019 ಮಧ್ಯಾಹ್ನ 3:00

We, the people – in Defence of Democracy

`ಮಾರ್ಕ್ಸ್ 200 ಕ್ಯಾಪಿಟಲ್ 150′ ಮಾಲಿಕೆಯ ಮೂರನೆಯ ಕಂತಿನ ಪುಸ್ತಕಗಳ ಲೋಕಾರ್ಪಣೆ ಮತ್ತು ಉಪನ್ಯಾಸ

ಮಾರ್ಕ್ಸ್ 200 – ಕ್ಯಾಪಿಟಲ್ 150 ಮಾಲಿಕೆಯ ಕೂಪನ್ ಖರೀದಿಸಲು ಮೊಬೈಲ್ ಸಂಖ್ಯೆ 9902249150 ಅನ್ನು ಸಂಪರ್ಕಿಸಿ

ಆಹ್ವಾನ : `ಮಾರ್ಕ್ಸ್ 200 ಕ್ಯಾಪಿಟಲ್ 150′ ಮಾಲಿಕೆಯ ಮೊದಲ ಕಂತಿನ ಪುಸ್ತಕಗಳ ಬಿಡುಗಡೆ ಮತ್ತು ವಿಚಾರ ಸಂಕಿರಣ

`ಜಗತ್ತಿನ ವ್ಯಾಖ್ಯಾನ ಮಾಡಿದರೆ ಸಾಲದು, ಅದನ್ನು ಬದಲಿಸುವುದು ಹೇಗೆಂದು ಯೋಚಿಸಬೇಕು’ ಎಂದ ಈ ಶತಮಾನದ ಜಗತ್ಪ್ರಸಿದ್ಧ ಕೃತಿಯ ಲೇಖಕ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹುಟ್ಟಿ ಇಂದಿಗೆ 200 ವರ್ಷ

ಜಗತ್ತಿನ ವ್ಯಾಖ್ಯಾನ ಮಾಡಿದರೆ ಸಾಲದು, ಅದನ್ನು ಬದಲಿಸುವುದು ಹೇಗೆಂದು ಯೋಚಿಸಬೇಕು ಎಂದ ತತ್ವಜ್ಞಾನಿ ಕಾರ್ಲ್‌ಮಾರ್ಕ್ಸ್ ಅವರ ಜನ್ಮದಿನ ಮೇ ೫ ೧೮೧೮ ಆಗಿದ್ದು, ಈ ವರ್ಷ(೨೦೧೮) ಮಾರ್ಕ್ಸ್‌ಅವರ ದ್ವಿಶತಾಬ್ದಿ ವರ್ಷ.

ಸೆಪ್ಟೆಂಬರ್ ೧೪, ೧೮೬೭ ಮಾರ್ಕ್ಸ್‌ಅವರ ಮೇರುಗ್ರಂಥ ’ದಾಸ್‌ಕ್ಯಾಪಿಟಲ್’ ಮೊದಲ ಸಂಪುಟ ಪ್ರಕಟವಾದ ದಿನವಾಗಿದ್ದು ಈ ವರ್ಷ(೨೦೧೮) ಆ ಗಮನಾರ್ಹ ದಿನದ ೧೫೦ ತುಂಬಿದ ವರ್ಷ.

ಇವೆರಡೂ ದಿನಗಳನ್ನು ನೆನಪಿಸಿಕೊಂಡು ಈ ವರ್ಷವನ್ನು ಸೂಕ್ತವಾಗಿ ಆಚರಿಸಲು, ಪ್ರಗತಿಪರ ಪುಸ್ತಕಗಳ ಪ್ರಮುಖ ಪ್ರಕಾಶಕರಾದ ನವಕರ್ನಾಟಕ ಮತು ಕ್ರಿಯಾ ಮಾಧ್ಯಮ ಮಾರ್ಕ್ಸ್ ೨೦೦-ಕ್ಯಾಪಿಟಲ್ ೧೫೦ ಎಂಬ ಮಾಲಿಕೆಯಲ್ಲಿ ಕನ್ನಡದಲ್ಲಿ ಲಭ್ಯವಿಲ್ಲದ ಮಾರ್ಕ್ಸ್‌ವಾದದ ಸಾರ ಎನ್ನಬಹುದಾದ ಪ್ರಮುಖ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಿವೆ. ಮೇ ೨೦ರಂದು (ಈ ಕೆಳಗೆ ಕಾಣಿಸಿದ) ಪುಸ್ತಕ ೩ ಮತ್ತು ೭ ಬಿಡುಗಡೆಯಾಗಲಿವೆ. ಉಳಿದವು ಸೆಪ್ಟೆಂಬರ್ ೧೪, ೨೦೧೮ರೊಳಗೆ ಬಿಡುಗಡೆಯಾಗಲಿವೆ.

 

 ಮಾರ್ಕ್ಸ್ ೨೦೦-ಕ್ಯಾಪಿಟಲ್ ೧೫೦

ಮಾಲಿಕೆಯಲ್ಲಿ ಪ್ರಕಟವಾಗಲಿರುವ ಏಳು ಕೃತಿಗಳು ಈ ಕೆಳಗಿಂತಿವೆ

 

೧.   ಬಂಡವಾಳ ಸಂಪುಟ ೧ (ಹಲವು ಪರಿಣತ ಲೇಖಕರು/ಅನುವಾದಕರು * ಅನುವಾದಕರ ಪಟ್ಟಿ ಕೆಳಗಿದೆ)

೨.   ಭಾರತದಕುರಿತು ಮಾರ್ಕ್ಸ್- ಅನು: ವಿಶ್ವಕುಂದಾಪುರ

೩.   ಫ್ರಾನ್ಸಿನಅಂತರ್ಯುದ್ಧ (ಪ್ಯಾರಿಸ್ ಕಮ್ಯೂನ್-೧೮೭೧, ಮೊದಲ ಕಾರ್ಮಿಕಕ್ರಾಂತಿ)ಅನು: ವಿಶ್ವಕುಂದಾಪುರ

೪.   ಆರ್ಥಿಕ ಮತ್ತು ತತ್ವಶಾಸ್ತ್ರೀಯ ಕೈಬರಹಗಳು-೧೮೪೪ – ಅನು: ನಾ.ದಿವಾಕರ್

೫.   ರಾಜಕೀಯಅರ್ಥಶಾಸ್ತ್ರದ ವಿಮರ್ಶೆಗೆಒಂದುಕೊಡುಗೆ – ಅನು: ಸಿ.ಆರ್.ಶಾನಭಾಗ

೬.   ಲೂಯಿ ಬೊನಪಾರ್ಟೆಯ ೧೮ನೇ ಬ್ರೂಮೈರ್ – ಅನು: ಫಣಿರಾಜ್ ಕೆ.

೭.   ತತ್ವಶಾಸ್ತ್ರದದಾರಿದ್ರ್ಯ – ಅನು: ಕೆ.ಪಿ.ವಾಸುದೇವನ್

 

ಈ ಮಾಲಿಕೆಯಒಟ್ಟು ಬೆಲೆ ರೂ. ೨೧೦೦ ಆಗಿದ್ದು ಪ್ರಕಟಣಾ-ಪೂರ್ವ (ಅಂದರೆ ಸೆಪ್ಟೆಂಬರ್ ೧೪, ೨೦೧೮ರ ಮೊದಲು) ಬೆಲೆ ರೂ. ೧೪೦೦ ಆಗಿರುತ್ತದೆ.

ಈ ಮಾಲಿಕೆಯ ಪ್ರಕಟಣೆಯಲ್ಲಿ ಸುಮಾರು ಮೂವತ್ತು ಅತ್ಯಂತ ಪರಿಣತ ಕನ್ನಡ ಲೇಖಕರು, ಅನುವಾದಕರು ಈ ಕಾಯಕದಲ್ಲಿ ವಿವಿಧರೀತಿಯಲ್ಲಿ ಕೈಜೋಡಿಸಿದ್ದಾರೆ.

ಈ ಮಾಲಿಕೆಯಲ್ಲಿ ಬರುವ ಪುಸ್ತಕಗಳು ಬರಿಯ ಬಿಡಿ ಪುಸ್ತಕಗಳಾಗಿರದೆ, ಮುಂದಿನ ಪೀಳಿಗೆಗೆ ಮಾರ್ಕ್ಸ್‌ವಾದದ ಪ್ರಮುಖ ಸಾರಕೊಡುವ ಪುಸ್ತಕಗಳ ಸಮಗ್ರ ಸಂಪುಟವಾಗಿದೆ. ಮಾರ್ಕ್ಸ್ ಕೃತಿಗಳನ್ನು – ನೇರ ಅನುವಾದ, ಸಂಗ್ರಹಾನುವಾದ ಅಥವಾ ಸಾರ ಕೊಡುವ ಸ್ವತಂತ್ರ ಬರಹಗಳ ರೂಪಗಳು- ಇವುಗಳಲ್ಲಿ ಯಾವ ರೂಪದಲ್ಲಿ ತರಬೇಕು ಎಂಬ ಆಯ್ಕೆಯನ್ನು ಕೃತಿವಾರಾಗಿ ಮಾಡಲಾಗಿದೆ. ಈ ಮಾಲಿಕೆಯಲ್ಲಿ ಪ್ರಕಟವಾಗುವ ಪ್ರತಿ ಕೃತಿಗೂ ಕೃತಿಯನ್ನು ಅರ್ಥ ಮಾಡಿಕೊಳ್ಳಲು ಬೇಕಾಗುವ – ಹಿನ್ನೆಲೆ, ಕೃತಿಯ ಇಂದಿನ ಪ್ರಸ್ತುತತೆ, ಕೃತಿಯ ಸಾರಾಂಶ, ಕೃತಿಯ ಬಗ್ಗೆ ಆ ಮೇಲಿನ ಚರ್ಚೆ-ವಿವಾದಗಳು -ಇವನ್ನು ಒಳಗೊಂಡ ಒಂದು ಪ್ರವೇಶಿಕೆ ಇರುತ್ತದೆ.

* ಬಂಡವಾಳ ಸಂಪುಟ ೧ ಅನುವಾದ ಸಂಯೋಜನೆ : ಡಾ. ಜಿ.ರಾಮಕೃಷ್ಣ

ಅನುವಾದಕರ ಪಟ್ಟಿ : ಜಿ.ರಾಜಶೇಖರ, ಎಸ್.ಶಿವಾನಂದ, ನಗರಗೆರೆರಮೇಶ್, ಬಿ.ಆರ್. ಮಂಜುನಾಥ, ವಿ.ಎನ್.ಲಕ್ಷ್ಮಿನಾರಾಯಣ, ಟಿ. ವೆಂಕಟೇಶ ಮೂರ್ತಿ, ಟಿ.ಎಸ್.ವೇಣುಗೋಪಾಲ್, ಶೈಲಜಾ, ಬಿ.ಶ್ರೀಪಾದ ಭಟ್, ವೇದರಾಜಎನ್.ಕೆ., ವಸಂತರಾಜಎನ್.ಕೆ., ಎ.ಎಸ್. ಆಚಾರ್ಯ, ಯಡೂರ ಮಹಾಬಲ, ವಿ.ಎಸ್.ಶ್ರೀಧರ, ಎಚ್.ಜಿ.ಜಯಲಕ್ಷ್ಮಿ, ಎಚ್.ವಿ.ರಾವ್, ಎಂ.ಸಿ. ದೋಂಗ್ರೆ

ಕೂಪನ್ ಖರೀದಿಸಲು ಇಚ್ಛಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆ 9902249150 ಗೆ ಕರೆಮಾಡಿ.

`ಇಂಡಿಯಾ 70′, ಜನಶಕ್ತಿ ಕನ್ನಡ ವಾರಪತ್ರಿಕೆಯ ವಿಶೇಷ ಸಂಚಿಕೆಯ ಬಿಡುಗಡೆಗೆ ಆಹ್ವಾನ

ಕ್ಯೂಬಾ ಎಂದರೆ ಕ್ಯಾಸ್ಟ್ರೋ, ಕ್ಯಾಸ್ಟ್ರೋ ಎಂದರೆ ಕ್ಯೂಬಾ ಅನ್ನುವಂತೆ ಬದುಕಿದ ಕ್ಯಾಸ್ಟ್ರೋ ಜನ್ಮದಿನವಾದ ಇಂದು ಅವರನ್ನು ನೆನೆಸೋಣ

ಕ್ಯೂಬಾ ಎಂದರೆ ಕ್ಯಾಸ್ಟ್ರೋ, ಕ್ಯಾಸ್ಟ್ರೋ ಎಂದರೆ ಕ್ಯೂಬಾ – ಈ ಎರಡನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಫೀಡೆಲ್ ಕ್ಯಾಸ್ಟ್ರೊ ತಮ್ಮ ದೇಶವನ್ನು, ತಮ್ಮ ಜನರನ್ನು ಬದುಕಿದರು.

ದೈತ್ಯ ಅಮೆರಿಕಾ ಸಂಯುಕ್ತ ಸಂಸ್ಥಾನದ ಮಗ್ಗುಲಲ್ಲಿರುವ ಕ್ಯೂಬಾ ಎಂಬ ಪುಟ್ಟ ದೇಶದ ಅಧ್ಯಕ್ಷರಾಗಿದ್ದ ಫೀಡೆಲ್ ಕ್ಯಾಸ್ಟ್ರೊ 5 ದಶಕಗಳಷ್ಟು ಸುದೀರ್ಘ ಕಾಲ ಅಧಿಕಾರದಲ್ಲಿದ್ದವರು. 1959ರಿಂದ 76ರವರೆಗೆ ಅಧ್ಯಕ್ಷರಾಗಿಯೂ 1976ರಿಂದ 2008ರವರೆಗೆ ಅಧ್ಯಕ್ಷರಾಗಿಯೂ ಕ್ಯೂಬಾವನ್ನು ಮುನ್ನಡೆಸಿದ ಕ್ಯಾಸ್ಟ್ರೋ, ನಂತರದಲ್ಲಿ ರಾಜಕೀಯ ನಿವೃತ್ತಿ ಪಡೆದಿದ್ದರು. ಅಲ್ಲಿಂದ ಮುಂದೆ ಅವರು ಸಾರ್ವಜನಿಕರ ನಡುವೆ ಕಾಣಿಸಿಕೊಂಡಿದ್ದು ಬಹಳ ಅಪರೂಪ. ಹಾಗಿದ್ದೂ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ಭಾಗವಹಿಸಿ, “ನಾನು ಜೀವನದಲ್ಲಿ ಇಷ್ಟು ವರ್ಷಗಳನ್ನು ನೋಡ್ತೇನೆ ಅಂದುಕೊಂಡಿರಲಿಲ್ಲ, ಕ್ಯೂಬಾವನ್ನು ಚೆನ್ನಾಗಿ ನೊಡಿಕೊಳ್ಳಿ” ಎಂದು ಭಾವುಕರಾಗಿ ಮಾತನಾಡಿದ್ದರು. ಅವರ ಈ ಮಾತು ಈ ಹೊತ್ತು ಕ್ಯೂಬನ್ನರ ಪಾಲಿಗೆ ಅಂತಿಮ ಸಂದೇಶದಂತೆ ಮಹತ್ವದ್ದಾಗಿಯೂ, ಭವಿಷ್ಯದ ದಿನಗಳಿಗೆ ನಿರ್ದೇಶನದಂತೆಯೂ ಇದೆ.

ಜಾಗತಿಕ ರಾಜಕೀಯ ಪಂಡಿತರು, ಟೀಕಾಕಾರರು ಏನೇ ಹೇಳಿದರೂ ಬಹುಪಾಲು ಕ್ಯೂಬನ್ನರು ತಮ್ಮ ಪ್ರೀತಿಯ ನಾಯಕನನ್ನು ಬಿಟ್ಟುಕೊಡುವುದಿಲ್ಲ. “ಎಲ್ಲ ದೇಶಗಳಲ್ಲೂ ಒಂದಲ್ಲ ಒಂದು ಸಮಸ್ಯೆ ಇರುವಂತೆಯೇ ಕ್ಯೂಬಾದಲ್ಲೂ ಇದೆ. ಆದರೆ ನೀವು ಮನೆಯಿಲ್ಲದೆ ಬೀದಿಯ ಮೇಲೆ ವಾಸಿಸುವ ಒಬ್ಬನೇ ಒಬ್ಬ ಕ್ಯೂಬನ್ ಪ್ರಜೆಯನ್ನು ನೋಡಲಾರಿರಿ” ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮತ್ತು ಅದಕ್ಕೆ ಕಾರಣರಾದ ಕ್ಯಾಸ್ಟ್ರೋರನ್ನು ಮನದುಂಬಿ ನೆನೆಯುತ್ತಾರೆ.

ತನ್ನ ನೆಲಕ್ಕಾಗಿ ಬಾಳಿ ಬದುಕಿದ, ಸಮಾನತೆ ಮತ್ತು ಸರ್ವೋದಯಕ್ಕಾಗಿ ಶ್ರಮಿಸಿದ ನಾಯಕನೊಬ್ಬನ ಯಶಸ್ಸಿಗೆ ಇದಕ್ಕಿಂತ ದೊಡ್ಡ ಮಾನದಂಡ ತಾನೆ ಏನಿದ್ದೀತು!?

ಸರ್ವಾಧಿಕಾರವನ್ನು ಎದುರಿಸಿ ನಿಂತ ಹೋರಾಟದಲ್ಲಿ ಬಂಧಿಯಾಗಿ ವಿಚಾರಣೆಗೆ ಒಳಗಾದಾಗ ತನ್ನ ಪರವಾಗಿ ತಾನೇ ವಾದ ಮಾಡಿದ ವಿಶಿಷ್ಟ ವ್ಯಕ್ತಿ ಫೀಡೆಲ್ ಕ್ಯಾಸ್ಟ್ರೋ. 1953 ಅಕ್ಟೋಬರ್ 6 ರಂದು ತಮ್ಮ ವಾದದ ಕೊನೆಯಲ್ಲಿ ಲಿಖಿತ ರೂಪದಲ್ಲಿ ಓದಿದ ದೀರ್ಘ ಭಾಷಣದ ಅಂತಿಮ ವಾಕ್ಯವೇ “ಇತಿಹಾಸ ನನ್ನನ್ನು ಮುಕ್ತಗೊಳಿಸುತ್ತದೆ”. ಈ ಲಿಖಿತ ಭಾಷಣವು ಒಂದು ದಸ್ತಾವೇಜು. ಇದು ದಬ್ಬಾಳಿಕೆ (tyranny) ವಿರುದ್ಧ ಕ್ರಾಂತಿಕಾರಿ ಸಂಘರ್ಷದ ಒಂದು ಪ್ರಣಾಳಿಕೆ, ಕಾರ್ಯಕ್ರಮ, ಆರೋಪ ಮತ್ತು ಖಂಡನೆಯಾಗಿದೆ. ಜೊತೆಗೆ ಕಾನೂನಾತ್ಮಕ, ನೈತಿಕ, ತಾತ್ವಿಕ ಮತ್ತು ರಾಜಕೀಯ ಪ್ರತಿವಾದವಾಗಿದೆ. ಇದು ಒಂದು ರೀತಿ ಕ್ಯೂಬನ್ ಕ್ರಾಂತಿಯ ಮೂಲಭೂತ ದಸ್ತಾವೇಜು. ಕ್ಯೂಬಾ ಮತ್ತು ಲ್ಯಾಟಿನ್ ಅಮೇರಿಕಾದಲ್ಲಿ ರಾಜಕೀಯ ತತ್ವ ಮತ್ತು ಕ್ರಾಂತಿಕಾರಿ ಕಾರ್ಯಾಚರಣೆಯ ಚರಿತ್ರೆಯಲ್ಲಿ ಒಂದು ಪ್ರಮುಖ ಪಠ್ಯವಾಗಿದೆ.

ಇಂತಹ ಮಹಾನ್ ಚೇತನದ ಜೀವನ ಚರಿತ್ರೆ ಕನ್ನಡದ ಓದುಗರಿಗಾಗಿ ಪ್ರಕಟಣೆಗೊಂಡಿದೆ

-ಕೃಪೆ ಜನಶಕ್ತಿ ವಾರಪತ್ರಿಕೆ, ಮಾಧ್ಯಮನೆಟ್

ಶೀರ್ಷಿಕೆ : ಕ್ಯಾಸ್ಟ್ರೋ ಕತೆ ಮೂಲ:ಇಗ್ನೀಷಿಯಾ ರಮೋನೆಟ್  ಕನ್ನಡಕ್ಕೆ : ಕೆ.ಪ್ರಕಾಶ್ ಪ್ರಕಾಶನ : ಕ್ರಿಯಾ ಪುಸ್ತಕ ಪುಟ :  286   ಬೆಲೆ : ರೂ.225 ಪ್ರಕಟಣಾ ವರ್ಷ : 2017

 

 

ಭೀಮಯಾನವದು ಸಮಸಮಾಜಕ್ಕೆ ಮೆಟ್ಟಿಲು

ಶೀರ್ಷಿಕೆ : ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಅನುವಾದಕರು :  ವಿವಿಧ ಅನುವಾದಕರು

ಪ್ರಕಾಶಕರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಬೆಲೆ : ರೂ.50 ಬಿಡಿ ಸಂಪುಟಕ್ಕೆ

ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಒಟ್ಟು 22 ಸಂಪುಟದಲ್ಲಿ ಪ್ರಕಟವಾಗಿವೆ.