
`ಕೆರೆಯ ನೀರನ್ನು ಕುಡಿಯಲು ಜಾತಿ ಆಧಾರಿತ ನಿರ್ಬಂದ’ ಎಂತಹ ಕ್ರೂರ ನಡವಳಿಕೆ.
ಈ ಕ್ರೂರ ನಿರ್ಬಂಧವನ್ನು ಧಿಕ್ಕರಿಸಿ ಚವದಾರ್ ನದಿ ನೀರನ್ನು ಕುಡಿಯುವ ಹೋರಾಟ ಭಾರತದ ಚರಿತ್ರೆಯಲ್ಲೇ ಅಮೋಘವಾದ ಹೋರಾಟ. ಭಾರತದ ಚರಿತ್ರೆಯಲ್ಲಿ ಪ್ರಮುಖ ಮೈಲಿಗಲ್ಲು ಇದು. ಇದು ‘ಮಹಾಡ್’ ಹೋರಾಟವೆಂದೇ ಜನಪ್ರಿಯ. ಆದರೆ ಈ ಮಹತ್ವದ ಹೋರಾಟದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುವಂತಹ ಪುಸ್ತಕ ಇದುವರೆಗೆ ಇರಲಿಲ್ಲ.
ಈ ಕೊರತೆಯನ್ನು ಈಗ ನಿವಾರಿಸಲಾಗಿದೆ. ಮಹಾಡ್ ಕೆರೆ ಸತ್ಯಾಗ್ರಹ-ದಲಿತ ಚಳುವಳಿಗಳ ಒರೆಗಲ್ಲು' ಮತ್ತು
`ಮಹಾಡ್ -ಮೊದಲ ದಲಿತ ಬಂಡಾಯ’ ಎಂಬ ಶೀರ್ಷಿಕೆಯ ಎರಡು ಪುಸ್ತಕ ಕನ್ನಡದ ಓದುಗರಿಗಾಗಿ ತಯಾರಾಗಿವೆ. ಅದನ್ನು ಕನ್ನಡಿಗರಿಗೆ ಒಪ್ಪಿಸುವ ಆನ್ ಲೈನ್ ಸಮಾರಂಭಕ್ಕೆ ತಮಗೆಲ್ಲಾ ಸ್ವಾಗತ.
Filed under: Uncategorized | Tagged: ದೇವನೂರು ಮಹಾದೇವ, ಮಹಾಡ್ ಕೆರೆ ಸತ್ಯಾಗ್ರಹ, ಮಹಾಡ್ ದಲಿತ ಹೋರಾಟ | Leave a comment »