ನಾಗೇಶ್ ಹೆಗಡೆ ಅವರ 3 ಪುಸ್ತಕಗಳ ಬಿಡುಗಡೆ

ನಾಳೆ

ನಿಸರ್ಗವನ್ನು ತಿದ್ದಿ, ತೀಡಿ, ಪೋಷಿಸಿ ಒಲಿಸಿಕೊಳ್ಳುವ ಬದಲು ಅದನ್ನು ಬಗ್ಗುಬಡಿದು, ಧಮಕಿ ಹಾಕಿ ಒಗ್ಗಿಸಿಕೊಳ್ಳಬೇಕೆಂಬ ಕೆಟ್ಟ ಪಾಠವನ್ನು ನಮಗೆ ಕಲಿಸಿಕೊಡುತ್ತದೆ ಟೆಕ್ನಾಲಜಿ.
ಎನ್ನುವ `ಸುರಿಕೊಂಡ ಭರತಖಂಡ’
ಇರುವುದೊಂದೇ ಭೂಮಿ. ಅದರ ರಕ್ಷಣೆ ನಮ್ಮದು ಎನ್ನುವ `ಇರುವುದೊಂದೇ ಭೂಮಿ’
ಪರಿಸರ ದಿನಾಚರಣೆ ವರ್ಷಕ್ಕೊಂದೇ ದಿನದ ಬದಲು ಪ್ರತಿದಿನ ಆಚರಿಸುವ ಅಗತ್ಯವನ್ನು ಹೇಳುವ `ಪ್ರತಿದಿನ ಪರಿಸರ ದಿನ’

ನಾಗೇಶ್ ಹೆಗಡೆ ಅವರ 3 ಪುಸ್ತಕಗಳ ಬಿಡುಗಡೆ ಇದೆ.
ಪ್ರೊ ಬಿ ಕೆ ಸಿ ಮತ್ತು ಕೆ ವಿ ಅಕ್ಷರ ಜೊತೆಗೆ ನೇಮಿಚಂದ್ರ ಇರುತ್ತಾರೆ.
ವರ್ಲ್ಡ್ ಕಲ್ಚರ್ ನಲ್ಲಿ.
ಹತ್ತಕ್ಕೆ.
ಸಾಧ್ಯವಾದರೆ ಬನ್ನಿ.

ಮುಸುಕಿನಲ್ಲಿ ಮಾಯಾಂಗನೆ

ಕನ್ನಡಕ್ಕೆ ದಕ್ಕಿದ ಹೊಸ ಆಸ್ತಿ ಎಂದು ನಾಗೇಶ್ ಹೆಗಡೆ ವರ್ಣಿಸಿರುವ ಡಾ.ಕೆ.ಎನ್.ಗಣೇಶಯ್ಯ, ವೃತ್ತಿಯಿಂದ ಕೃಷಿ ವಿಜ್ಞಾನಿ. ಕೋಲಾರದ ಪ್ರತಿಭೆ. ಕನಕ ಮುಸುಕು ಅವರ ಚೊಚ್ಚಲ ಕಾದಂಬರಿ.

ಓದುತ್ತಾ ಹೋದಂತೆ ಯಾವುದೋ ಸಂಶೋಧನೆಯನ್ನು ಆಧರಿಸಿದ ಸತ್ಯಕತೆ ಇರಬಹುದೇನೋ ಎಂಬ ಗುಮಾನಿ ಮೂಡಿಸುತ್ತಾ, ಫ್ಯಾಕ್ಟ್ಸ್ ಮತ್ತು ಫಿಕ್ಷನ್ ನಡುವಿನ ವ್ಯತ್ಯಾಸವೇ ಅಳಿಸಿಹೋದಂತೆ ಭಾಸವಾಗುವ ಇದನ್ನು `ಫ್ಯಾಕ್ಷನ್ಎನ್ನಬಹುದಾ?

ಕಾದಂಬರಿಯ ಒಳಗೇ ಅವರು ಸಂದರ್ಭಕ್ಕೆ ತಕ್ಕ ವಿವರಗಳನ್ನು ಮಾಹಿತಿಗಳನ್ನು ಮತ್ತು ಪುರಾವೆಗಳನ್ನು ಒದಗಿಸುತ್ತಾ ಹೋಗುವ ಕ್ರಮ ಕುತೂಹಲಕಾರಿಯಾಗಿದೆ. ಹೀಗಾಗಿ ಓದುಗನಿಗೆ ತಾನೊಂದು ಗಂಭೀರ ಅಧ್ಯಯನದಿಂದ ಹುಟ್ಟಿದ, ಲೇಖಕ ತುಂಬಾ ಶ್ರಮ ಮತ್ತು ಪ್ರೀತಿ ಇಟ್ಟುಕೊಂಡು ಬರೆದ ಕೃತಿ ಎಂಬ ನಂಬಿಕೆ ಹುಟ್ಟಿಸುತ್ತದೆ. ಒಂದು ಕೃತಿ ಇಷ್ಟವಾಗುವುದಕ್ಕೆ ಬೇಕಾಗುವುದು ಅಂಥ ನಂಬಿಕೆಯೇ ತಾನೆ?

ಮಸಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಯಿಸುವಂತೆ ಮಾಡಿರುವ ಕಾದಂಬರಿ ಎಂದೂ ನಾಗೇಶ ಹೆಗಡೆ ಮೆಚ್ಚಿಕೊಂಡಿದ್ದಾರೆ. ಅವರ ಮಾತಿಗೆ ಮೆಚ್ಚಿ ಅಹುದಹುದೆನ್ನುವಂತಿದೆ ಈ ಕಾದಂಬರಿ.

ಶಾಲಭಂಜಿಕೆ, ಕರಿಸಿರಿಯಾನದ ಮೂಲಕ ಹೆಸರಾಗಿರುವ ಗಣೇಶಯ್ಯ ಅವರ ಮುಂದಿನ ಬರಹಗಳಿಗೆ ಕಾಯುವ ಕುತೂಹಲವನ್ನಂತೂ ಈ ಕಾದಂಬರಿ ಮೂಡಿಸುತ್ತದೆ.

ಶೀರ್ಷಿಕೆ : ಕನಕ ಮುಸುಕು ಲೇಖಕರು : ಡಾ. ಕೆ. ಎನ್. ಗಣೇಶಯ್ಯ ಪ್ರಕಾಶಕರು : ಆದಿಮ ಪುಟಗಳು : 232 ಬೆಲೆ: ರೂ.140/-

ಕೃಪೆ : ಕನ್ನಡ ಪ್ರಭಾ