ಆಹಾ! ವಿಶ್ವ ಕಥಾ ಕೋಶ ಮತ್ತೆ ಕನ್ನಡಿಗರಿಗೆ ಲಭ್ಯವಾಗಲಿದೆ!!!

ಈ ಕಥಾಸಂಕಲನದ ಸಂಕಲನದ ಆಕರ್ಷಣೆ ಇದರ ಸಂಪಾದಕ ನಿರಂಜನ ಎಂಬುದರಲ್ಲಿದೆ. ಅಷ್ಟೇ ಅಲ್ಲ ಇದರ ಎಲ್ಲಾ ಸಂಪುಟಗಳು ನಿರಂಜನ ಅವರ ಪ್ರಾಸ್ತಾವಿಕ ಮಾತುಗಳನ್ನು ಹೊಂದಿದೆ. ಈ ಪ್ರಸ್ತಾವನೆಗಳು ಆ ಸಂಪುಟ ಯಾವ ದೇಶಗಳ ಕತೆಗಳಿಗೆ ಸಂಬಂಧಿಸಿದ್ದೋ ಆ ದೇಶಗಳ ಭೂಗೋಳ, ಇತಿಹಾಸ ಎಲ್ಲಾ ಚುಟಕಾದರೂ ಮಾಹಿತಿ ಭರಿತವಾಗಿವೆ.

ಈ ಮೇಲಿನ ಸಂಪುಟಗಳನ್ನು ಹೊಂದಿರುವ ಈ ವಿಶ್ವ ಕಥಾ ಕೋಶದಲ್ಲಿ ಮೇಲೆ ಪಟ್ಟಿಮಾಡಿದ ಶೀರ್ಷಿಕೆಗಳಡಿಯಲ್ಲಿ ಭಾರತ (ಎರಡು ಸಂಪುಟ – ಧರಣಿ ಮಂಡಲ ಮಧ್ಯದೊಳಗೆ ಕನ್ನಡದ ಕತೆಗಳಾದರೆ ಸುಭಾಷಿಣಿ – ಇತರ ಭಾರತೀಯ ಕತೆಗಳೊಂದಿಗೆ ಭಾರತದ ನೆರೆ ಹೊರೆ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಬರ್ಮಾದ ಕತೆಗಳ ಸಂಗ್ರಹ. ಇವಲ್ಲದೆ, ಆಫ್ರಿಕಾ ಖಂಡ, ವಿಯೆಟ್ನಾಮ್, ಮಂಗೋಲಿಯಾ, ಚೀನ, ಜಪಾನ್, ಕೊರಿಯಾ, ಇಂಗ್ಲಂಡ್, ಹಂಗರಿ, ರುಮಾನಿಯ, ಆಸ್ಟ್ರೇಲಿಯಾ, ನ್ಯುಜಿಲ್ಯಾಂಡ್, ರಷ್ಯ, ಐರ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್, ಜೆಕೊಸ್ಲೋವಾಕಿಯಾ, ಪೋಲೆಂಡ್, ಯಗೋಸ್ಲಾವಿಯಾ, ಅಲ್ಬೇನಿಯಾ, ಬಲ್ಗೇರಿಯಾ, ಅಮೆರಿಕ, ಕೆನಡಾ, ಮೆಕ್ಸಿಕೋ, ಐಸ್ಲ್ಯಾಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್, ಇಟಲಿ, ಆಸ್ಟ್ರೇಲಿಯಾ, ಗ್ರೀಸ್, ಸೈಪ್ರಸ್, ಟರ್ಕಿ, ಹಾಲೆಂಡ್, ಬೆಲ್ಜಿಯಂ, ಸ್ವಿಟ್ಜರ‍್ಲ್ಯಾಂಡ್, ಜರ್ಮನಿ, ಸ್ಪೈನ್, ಪೋರ್ತುಗಲ್, ಇಂಡೋನೇಷ್ಯಾ, ಫಿಲಿಪೈನ್ಸ್, ಮಲಯ, ಸಿಂಗಾಪುರ, ಥಾಯ್ ಲ್ಯಾಂಡ್, ಫ್ರಾನ್ಸ್, ಕ್ಯೂಬಾ, ಜಮೇಯಿಕಾ, ಪಶ್ಚಿಮ ಏಷ್ಯಾ, ದಕ್ಷಿಣ ಅಮೇರಿಕಾ ದೇಶಗಳ ಕತೆಗಳು 24 ಸಂಪುಟಗಳಲ್ಲಿ ಓದಬಹುದು. ಕೊನೆಯ ಸಂಪುಟದಲ್ಲಿ ಪ್ರಾಚೀನ ಪಂಚ ಮಹಾಕಾವ್ಯಗಳಿಂದ ಆಯ್ದ ಕತೆಗಳು ಇವೆ.

 

 

ನಿರಂಜನರ ಮೂಲಕ ಕಯ್ಯೂರು ಕಲಿಗಳು, ಕಯ್ಯೂರು ಕಲಿಗಳ ಮೂಲಕ ನಿರಂಜನರು ಚಿರಸ್ಮರಣೀಯರು.

ನಿರಂಜನರ ಮೂಲಕ ಕಯ್ಯೂರು ಕಲಿಗಳು, ಕಯ್ಯೂರು ಕಲಿಗಳ ಮೂಲಕ ನಿರಂಜನರು ಚಿರಸ್ಮರಣೀಯರು.
ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ…… ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಘ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿ ದಿನವೂ ಅವರ ಸಾಮಿಪ್ಯದ ಸವಿಯುಂಡೆ.
ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪು ನೀಡಿದ ದಿನ. ನಾಲ್ವರಿಗೆ ಮರಣದಂಡನೆ.
ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು.
`ಚಿರಸ್ಮರಣೆ’ ಒಂದು ಕಾದಂಬರಿ, ಚರಿತ್ರೆಯಲ್ಲ. ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು – ಆ ಕಾಲಾವಧಿಯ ಚೇತನವನ್ನು – ಕಲೆಯಲ್ಲಿ ಸೆರೆಹಿಡಿಯುವ ಯತ್ನ.
`ಚಿರಸ್ಮರಣೆ’ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರ ನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಿಸಿಲ್ಲ. ಇನ್ನು ಕೆಲ ಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.
-ನಿರಂಜನ
(ಪುಸ್ತಕದ ಬೆನ್ನುಡಿಯಿಂದ)

ಶೀರ್ಷಿಕೆ: ಚಿರಸ್ಮರಣೆ ಲೇಖಕರು:ನಿರಂಜನ ಪ್ರಕಾಶಕರು:ಡಿ.ವಿ.ಕೆ. ಮೂರ್ತಿ ಪುಟ:281 ಬೆಲೆ:ರೂ.45/-


ರಚಿತವಾಗಿ ಇಪ್ಪತ್ತು ವರ್ಷಗಳಾದಮೇಲೆ `ಚಿರಸ್ಮರಣೆ’ ಮಲಯಾಳಂ ಭಾಷೆಯಲ್ಲಿ ಮರುಹುಟ್ಟು ಪಡೆಯಿತು. ಕೇರಳದಲ್ಲಿ ಅದಕ್ಕೆ ದೊರೆತ ಸ್ವಾಗತದ ವಿವರ ತಿಳಿದಾಗ `ಧನ್ಯನಾದೆ’ ಎನಿಸಿತು. ಸ್ವಲ್ಪ ಸಮಯದ ಅನಂತರ ಕನ್ನಡದಲ್ಲಿ ಎರಡನೆಯ ಮುದ್ರಣ ಬಂತು. ಮುಂದೆ ತಮಿಳು, ತೆಲುಗು, ಮರಾಠಿ, ಬಂಗಾಳಿ, ತುಳು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅನುವಾದ ಬರತೊಡಗಿದವು.
ಚಿತ್ರೀಕರಣದ ಹಕ್ಕು ಪಡೆಯಲು ಬಂದವರು ಪ್ರಶ್ನೆ ಕೇಳಿದರು:
“ನಿಮ್ಮ ಕಾದಂಬರಿಯ ನಂಬೂದಿರಿ-ನಂಬಿಯಾರ‍್ ಯಾರು?”
ಉತ್ತರ:”ಪಾಳೆಗಾರಿಕೆಯ ಪ್ರತಿನಿಧಿಗಳು”
ಪ್ರಶ್ನೆ: “ದೇವಕಿ ಎಲ್ಲಿದ್ದಾಳೆ?”
ಉತ್ತರ:”ನನ್ನ ಕಾದಂಬರಿಯಲ್ಲಿ”
ಪ್ರಶ್ನೆ: “ಕಣ್ಣ…..”
ಉತ್ತರ: “ಜನತೆಯ ಚಳವಳಿಯಲ್ಲಿ ಸಿರಿಕಂಠದ ಹಾಡುಗಾರ ಇರಲೇಬೇಕು, ಅಲ್ಲ?
ಸಾಕ್ಷ್ಯಚಿತ್ರವೋ? ಕಥಾ ಚಿತ್ರವೋ?
ಚರಿತ್ರೆಯೋ? ಕಾದಂಬರಿಯೋ?
ಅವರು ಗೊಂದಲಕ್ಕೀಡಾಗಿದ್ದರು. ನಾನು ತಲೆಕೆಡಿಸಿಕೊಳ್ಳಲಿಲ್ಲ.
1925ರಲ್ಲಿ ಸೋವಿಯತ್ ಚಲಚ್ಚಿತ್ರ ನಿರ್ದೇಶಕ ಐಸೆನ್ ಸ್ಟೀನ್ `ಯುದ್ಧ ನೌಕೆ ಪೊಟೆಮ್ ಕಿನ್’ ಎಂಬ ಕಥಾಚಿತ್ರವನ್ನು ನಿರ್ಮಿಸಿದರು. ಅದು ಅಪಾರ ಮೆಚ್ಚುಗೆ ಗಳಿಸಿತು. ಆದರೆ ನಿಂದಕರೂ ಕೆಲವರಿದ್ದರು. ಅವರೆಂದರು:”ಇದು ಇತಿಹಾಸದ ಯತಾವತ್ ಚಿತ್ರಣವಲ್ಲ.”
ಆ `ಟೀಕೆ’ಗೆ ಉತ್ತರವಾಯಿತು, ಅದಕ್ಕೂ 150 ವರ್ಷ ಹಿಂದೆ ಜರ್ಮನ್ ಮಹಾಕವಿ ಗಯಟೆ ಹೇಳಿದ್ದ ಒಂದು ಮಾತು: `ಸಮ್ಯಕ್ ಸತ್ಯದ ದರ್ಶನಕ್ಕಾಗಿ ಸಣ್ಣ ಪುಟ್ಟ ಸತ್ಯಾಂಶಗಳು ಅಮುಖ್ಯವಾಗುತ್ತದೆ.’ ಅದೇ ಮಾತನ್ನು `ಚಿರಸ್ಮರಣೆ’ ಕಾದಂಬರಿಗೆ ಸಂಬಂಧಿಸಿ ನಾನು ಆಡಿದರೆ ತಪ್ಪಾದೀತೇ?
-ನಿರಂಜನ
(ಮೂಲ ಕನ್ನಡ ಕಾದಂಬರಿ `ಚಿರಸ್ಮರಣೆ’ಯ ಮುನ್ನುಡಿಯಿಂದ)
ಶೀರ್ಷಿಕೆ: ಸಾಶ್ವಿಲೊ ಉಗ್ಡಾಸ್ ಭಾಷೆ: ಕೊಂಕಣಿ ಲೇಖಕರು:ವಿತ್ತಿ, ಬೆಂಗ್ಳುರ‍್ ಪ್ರಕಾಶಕರು:ಕರ್ನಾಟಕ ಕೊಂಕಣಿ ಸಾಹಿತ್ ಅಕಾಡೆಮಿ ಪುಟ:280 ಬೆಲೆ:ರೂ.50/-