ಸಿಡಿ ಕಿಡಿ ನಾಡ ತೋಪುಗಳು ಸಿಗಲಿಲ್ಲವೇ

ಸಿನಿಮಾ ನಿರ್ದೇಶಕ ಟಿ. ಎಸ್. ನಾಗಾಭರಣ ಪ್ರೇಮಗೀತೆಗಳಿಂದಲೇ ಒಂದು ಕಥಾ ಹಂದರ ಸೃಷ್ಟಿಸಿ `ಮೈಸೂರು ಮಲ್ಲಿಗೆನಿರ್ಮಿಸಿದ ಹಾಗೆ `ರಂಗಾಯಣದ ಮೂವರು ವೃತ್ತಿ ನಟರು ಬೀಚಿಯವರ ಸಾಹಿತ್ಯವನ್ನು `ಕಟ್ಟುವ ಕ್ರಿಯೆಯಾಗಿಸಿದ ಫಲವೇ ಈ ಪುಸ್ತಕ. ಹೊಸ ನಾಟಕವೊಂದರ ಹುಡುಕಾಟವಾಗಿ ಆರಂಭವಾದ ಈ ಕ್ರಿಯೆ ರಂಗಭೂಮಿಯಲ್ಲಿ ಈ ವರೆಗೆ ಪ್ರಯೋಗಗೊಳ್ಳದಿರುವ ಬೀಚಿ ಸಾಹಿತ್ಯವನ್ನು ಅನಾವರಣಗೊಳಿಸುವ ಮಹತ್ವದ ಕೆಲಸ ಮಾಡಿದೆ.

ಬಹುಶ್ರುತ ಪ್ರತಿಭಾವಂತರೂ `ಹಾಸ್ಯ ಸಾಹಿತಿಎಂದಷ್ಟೇ ಚಿತ್ರಿತರಾಗಿರುವ, ಜನರ ನೆನಪಿನಿಂದ ಬಹುತೇಕ ಮರೆಯಾಗಿರುವ ಭೀಮಸೇನರಾಯರನ್ನು ಆನ್ ಅರ್ತ ಮಾಡುವ ಇಂಥದ್ದೊಂದು ಸಾಹಸ ಖಂಡಿತಕ್ಕೂ ಅಗತ್ಯವಿತ್ತು. ಅವರ ವೈಚಾರಿಕತೆ, ಮಾನವೀಯ ಅಂತಃಕರಣ, ಸಮಾಜದ ಬಗೆಗಿನ ಚಿಕಿತ್ಸಕ ನೋಟ, ವ್ಯಂಗ್ಯ ಲಾಯಕ್ಕಾದ `ನಾಟಕ ಸಾಮಾಗ್ರಿಎನ್ನುವುದರಲ್ಲಿ ಅನುಮಾನ ಇಲ್ಲ. ತನ್ನ ಅನ್ವೇಷಣೆಯ ನೆಲೆಯಿಂದಾಗಿ ಈ ಪುಸ್ತಕ ಒಂದು ಅಸಂಪ್ರದಾಯಿಕ ರೂಪವನ್ನೂ ಪಡೆದುಕೊಂಡಿದೆ.

ಹಿರಿಯ ರಂಗಕರ್ಮಿ, ನಿರ್ದೇಶಕ ಸಿ ಬಸವಲಿಂಗಯ್ಯ ವಿವರಿಸುವ ಹಾಗೆ, `ಮೂವರು ನಟರು ನಾಟಕಕಾರರ ಸ್ಥಾನದಲ್ಲಿ ನಿಂತು ಬೀಚಿಯವರ ಸಾಹಿತ್ಯ ಆಕರಗಳನ್ನು ಆಧರಿಸಿಯೇ, ಅಭಿನಯದ ಮೂಲಕ ಅದಕ್ಕೊಂದು ಕಲಾತ್ಮಕ ಆವರಣ ಸೃಷ್ಟಿಸಲು ಖೋ ಖೋ ಆಡಿದಂತೆ ನಾಟಕದ ಉದ್ದಕ್ಕೂ ಆವರಿಸಿಕೊಳ್ಳುವುದು ರಂಗದಲ್ಲಿ ಒಂದು ಹೊಸ ಅನುಭೂತಿಗೆ ಕಾರಣವಾಗುತ್ತದೆ.

ತುಂಬಾ ಜೀವಂತವಾಗಿರುವ, ತಕ್ಷಣದ ಪರಿಣಾಮ ಬೀರುವ ರಂಗಭೂಮಿ ಇಂತಹ ಅನೇಕ ಪ್ರಯೋಗಗಳಿಗೆ ತೆರೆದುಕೊಂಡಿದೆ, ತೆರೆದುಕೊಳ್ಳುತ್ತಲೇ ಇದೆ.

ಎಲ್ಲಾ ಓಕೆ. ಆದರೆ ಈಗಾಗಲೇ ಬೀಚಿ ಬುಲೆಟ್ಸ್ ಅಂತ ಪ್ರಯೋಗ ಆಗಿರುವಾಗ ಅದರ ಕಾಪಿ ಯಾಕೆ? ಬೀಚಿಯವರ ಭಂಡಾರದಲ್ಲಿಯೇ ಅರಸಿದ್ದರೆ ಯಾವುದಾದರೂ ಸಿಡಿಕಿಡಿ ನಾಡತೋಪುಗಳು ಸಿಕ್ಕುತ್ತಿದ್ದಾವು!

ಶೀರ್ಷಿಕೆ : ಬೀchi ಬುಲೆಟ್ಸ್ ಲೇಖಕರು : ಬೀchi ಪ್ರಕಾಶಕರು : ರಚನಾ ಪ್ರಕಾಶನ ಪುಟಗಳು :126 ಬೆಲೆ:ರೂ.60/-

ಕೃಪೆ : ವಿಜಯ ಕರ್ನಾಟಕ

ಬೀchi ಯವರ ಹಾಸ್ಯ ನಾಟಕಗಳು

ದಾಸ ಕೂಟ, ಬೆಳ್ಳಿ ತಿಮ್ಮ ನೂರೆಂಟು ಹೇಳಿದ, ತಿಮ್ಮನ ತಲೆ, ತಿಮ್ಮಾಯಣ, ನನ್ನ ಭಯಗ್ರಾಫಿ (ಆತ್ಮಕಥೆ), ಉತ್ತರಭೂಪ, ಅಂದನಾ ತಿಮ್ಮ, ತಿಮ್ಮ ರಸಾಯನ, ಸತೀಸೂಳೆ, ಹೆಣ್ಣು ಕಾಣದ ಗಂಡು, ಸರಸ್ವತಿ ಸಂಹಾರ, ಮಾತ್ರೆಗಳು, ಮಾತನಾಡುವ ದೇವರುಗಳು, ದೇವರಿಲ್ಲದ ಗುಡಿ, ಖಾದಿ ಸೀರೆ, ಸತ್ತವನು ಎದ್ದು ಬಂದಾಗ, ಟೆಂಟ್ ಸಿನಿಮಾ, ಬಿಟ್ಟಿದ್ದೆ ಬೇವು, ಬೆಂಗಳೂರು ಬಸ್ಸು, ಆರಿದ ಚಹಾ, ನರಪ್ರಾಣಿ, ಬ್ರಹ್ಮಚಾರಿ, ಎಲ್ಲಿರುವೆ ತಂದೆ ಬಾರೊ

ಬೀchi ಯವರ ನಾಟಕಗಳು

ರೇಡಿಯೋ ನಾಟಕಗಳು, ಹನ್ನೊಂದನೆಯ ಅವತಾರ, ಮನುಸ್ಮೃತಿ, ಏಕೀಕರಣ, ವಶೀಕರಣ, ಏಕೋದರರು, ಸೈಕಾಲಜಿಸ್ಟ್ ಸಾರಂಗ ಪಾಣಿ, ದೇವರ ಆತ್ಮಹತ್ಯೆ

ಬೀchi ಯವರ ಅಂಕಣಗಳು ಕೆನೆ ಮೊಸರು (ವಿಶಾಲ ಕರ್ನಾಟಕ), ಬೇವಿನಕಟ್ಟೆ (ರೈತ), ನೀವು ಕೇಳಿದಿರಿ (ಸುಧಾ)