ಚರಿತ್ರೆಯನ್ನು ಮುಚ್ಚಿರುವ ಪುರಾಣ, ದಂತಕಥೆಗಳ ಮುಸುಕನ್ನು ಸರಿಸಿ

scan0001

ದಾಮೋದರ ಧರ್ಮಾನಂದ ಕೊಸಾಂಬಿಯವರು ಆಧುನಿಕ ಭಾರತದ ಕೆಲವೇ ಶ್ರೇಷ್ಠ ವಿದ್ವಾಂಸರಲ್ಲಿ ಪ್ರಮುಖರು (1907-1966). ಅವರ ಬರವಣಿಗೆ ವೈಜ್ಞಾನಿಕ, ವಸ್ತುನಿಷ್ಠ ಪರಿಶೀಲನೆಗೆ ಹೆಸರಾಗಿದೆ. ವಿಜ್ಞಾನ, ಪುರಾತತ್ವ ಶಾಸ್ತ್ರ, ಸಾಹಿತ್ಯ, ಭಾಷಾ ಶಾಸ್ತ್ರ, ಸಂಸ್ಕೃತಿ – ಹೀಗೆ ಜ್ಞಾನದ ಹಲವು ಕ್ಷೇತ್ರಗಳಲ್ಲಿ ಆಳವಾದ ಅರಿವನ್ನು ಸಂಪಾದಿಸಿ ಅದನ್ನು ತಮ್ಮ ಅನೇಕ ಲೇಖನಗಳ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಕೊಸಾಂಬಿಯವರ `ದಿ ಕಲ್ಚರ್ ಅಂಡ್ ಸಿವಿಲೈಸೇಷನ್ ಆಫ್ ಏನ್ಶಿಯೆಂಟ್ ಇಂಡಿಯಾ ಇನ್ ಹಿಸ್ಟೋರಿಕಲ್ ಔಟ್ಲೈನ್ ನ `ದಿ ಆರ್ಯನ್’ ಎಂಬ ಅಧ್ಯಾಯದ ಕನ್ನಡಾನುವಾದ ಈ ಪುಸ್ತಿಕೆ. ಆ ಗ್ರಂಥದಲ್ಲಿ ಕೊಸಾಂಬಿಯವರು ಭಾರತದ ಇತಿಹಾಸವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಪರಿಶೀಲಿಸಿ ಇಲ್ಲಿನ ಚರಿತ್ರೆ, ಸಂಸ್ಕೃತಿಗಳನ್ನು ನಮಗೆ ಪರಿಚಯಿಸಿದ್ದಾರೆ. ಈ ದೇಶದ ನಿಜವಾದ ಚರಿತ್ರೆಯನ್ನು ಮುಚ್ಚಿರುವ ಪುರಾಣ, ದಂತಕಥೆಗಳ ಮುಸುಕನ್ನು ಸರಿಸಿ ನಮ್ಮ ಪರಂಪರೆಯ ನಿಜವಾದ ಚಿತ್ರವನ್ನು ನೀಡಿದ್ದಾರೆ. ಈ ಪುಸ್ತಕದ ಆಕರ ಗ್ರಂಥವು ಪ್ರಾಚೀನ ಭಾರತದ ಸಂಸ್ಕೃತಿ ಹಾಗೂ ನಾಗರೀಕತೆಯನ್ನು ಐತಿಹಾಸಿಕವಾಗಿ, ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಇಚ್ಛಿಸುವವರು ತಪ್ಪದೇ ಓದಬೇಕಾದ ಗ್ರಂಥ.
–    ಪುಸ್ತಕದ ಬೆನ್ನುಪುಟದಿಂದ
ಶೀರ್ಷಿಕೆ : ಆರ್ಯರು      ಲೇಖಕರು: ಡಿ.ಡಿ.ಕೊಸಾಂಬಿ     ಅನುವಾದ : ನಗರಕೆರೆ ರಮೇಶ್   ಪ್ರಕಾಶಕರು: ಬೆಳ್ಳಿಚುಕ್ಕಿ ಪ್ರಕಾಶನ       ಪುಟಗಳು:33