ಜುಂಜಪ್ಪ

ಜುಂಜಪ್ಪ ಕಾಡುಗೊಲ್ಲ ಬುಡಕಟ್ಟಿನ ಜನಪ್ರಿಯ ಸಾಂಸ್ಕೃತಿಕ ವೀರ. ಆತನ ಕುರಿತು ಗೊಲ್ಲ ಸಮುದಾಯದ ಹಿರಿಯರು ವಿವಿಧ ಸಂದರ್ಭಗಳಲ್ಲಿ ಪುನರ್ ಸೃಷ್ಟಿಸಿದ ಅಪೂರ್ಣ ಕತೆಗಳನ್ನು ಇಟ್ಟುಕೊಂಡು ಸಮಗ್ರ ಚಿತ್ರಣ ದೊರೆಯುವ ಹಾಗೆ ಕತೆಗಳನ್ನು ಶಿವಣ್ಣ ಇಲ್ಲಿ ಪುನರ್ರಚಿಸಿದ್ದಾರೆ. ಎತ್ತಪ್ಪ – ಜುಂಜಪ್ಪರ ಕುರಿತು ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಸುದೀರ್ಘ ಕ್ಷೇತ್ರ ಕಾರ್ಯಧಾರಿತ ಮಹಾಪ್ರಬಂಧ ರಚಿಸಿರುವ ಶಿವಣ್ಣ ಅವರು ಅಲ್ಲಿನ ಅಡಿಟಿಪ್ಪಣಿ ಹಾಗೂ ಗಂಭೀರ ಭಾಗಗಳನ್ನು ತೆಗೆದುಹಾಕಿ ಸರಳಗೊಳಿಸಿ ಜನಸಾಮಾನ್ಯರಿಗೆ ಎಟುಕುವಂತೆ ಈ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಾ

ಜನಪ್ರಿಯ ಮಾಸಿಕ `ಮಯೂರದಲ್ಲಿ ಈಗಾಗಲೇ ಇಲ್ಲಿನ ಬಹುತೇಕ ಕತೆಗಳು ಪ್ರಕಟವಾಗಿವೆ. ಜಿ.ಕೆ.ಶಿವಣ್ಣನವರ ಅರ್ಥಗರ್ಭಿತ ರೇಖಾಚಿತ್ರಗಳು ಹಾಗೂ ಕೃಷ್ಣ ರಾಯಚೂರು ಅವರ ಮುಖಪುಟ ವಿನ್ಯಾಸದೊಂದಿಗೆ ಇದೀಗ ಪುಸ್ತಕ ರೂಪದಲ್ಲಿ ಸುಂದರವಾಗಿ ಮೂಡಿಬಂದಿದೆ.

ಶೀರ್ಷಿಕೆ: ಜುಂಜಪ್ಪ : ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ವೀರನ ಕತೆ ಲೇಖಕರು: ಮೀರಾಸಾಬಿಹಳ್ಳಿ ಶಿವಣ್ಣ ಪ್ರಕಾಶಕರು: ಪಟೇಲ್ ಪಬ್ಲಿಕೇಶನ್ಸ್ ಪುಟಗಳು : 152 ಬೆಲೆ:ರೂ. 100/-

ಕೃಪೆ : ಸುಧಾ

Advertisements