ಹಸಿವು, ಬಡತನ …. ಗಳಿಗೆ ಪರಿಹಾರ ಗಾಂಧಿ? ನೆಹರೂ? ಲೋಹಿಯಾ?…… ಯಾವ ವಾದ?

ನಮ್ಮ ದೇಶದ ಜನತೆಯನ್ನು ನೂರಾರು ಸಮಸ್ಯೆಗಳು ಸುಡುತ್ತಿವೆ – ಹಸಿವು, ಬಡತನ, ನಿರುದ್ಯೋಗ, ನಿರಕ್ಷರತೆ, ಅಸಮಾನತೆ, ಕೋಮುಗಲಭೆಗಳು, ಜಾತೀಯತೆ, ಅಸ್ಪೃಶ್ಯತೆ, ಪ್ರತ್ಯೇಕತೆ.

ಈ ಸಮಸ್ಯೆಗಳು ಸ್ವಾತಂತ್ರ್ಯ ಬಂದು 55 ವರ್ಷಗಳು ಕಳೆದರಇನ್ನೂ ಏಕೆ ಇವೆ?

ನಮ್ಮನ್ನು ಸುಡುತ್ತಿರುವ ಸಮಸ್ಯೆಗಳಿಗೆ ಹಲವಾರು ಪರಿಹಾರಗಳನ್ನು ಸೂಚಿಸಲಾಗಿದೆ. ಹಲವು `ವಾದಗಳು ಸಮಸ್ಯೆಗಳಿಗೆ ಮೂಲ ಕಾರಣ ಮತ್ತು ಪರಿಹಾರಗಳನ್ನು ಮುಂದಿಟ್ಟಿವೆ – ನೆಹರೂವಾದ, ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್ ವಾದ, ಉದಾರೀಕರಣ-ಜಾಗತೀಕರಣ, ಸಮಾಜವಾದ, ನಕ್ಸಲ ವಾದ, ಜನತಾ ಪ್ರಜಾಪ್ರಭುತ್ವ, ಹಿಂದೂತ್ವ, ಕಮ್ಯುನಿಸಂ, ಮಿಲಿಟರಿ ಸರ್ವಾಧಿಕಾರ ಇವು ಚಲಾವಣೆಯಲ್ಲಿರುವ ಹಲವು ವಾದಗಳು.

ಇವುಗಳಲ್ಲಿ ಯಾವುವು ಪರಿಹಾರಗಳು? ಯಾವುವು ಭ್ರಮೆಗಳು?

ಈ ಚರ್ಚಗಳು ಕಂಪೆನಿ ಬೋರ್ಡ ರೂಂಗಳಲ್ಲಿ, ತಜ್ಞರ ಸೆಮಿನಾರುಗಳ್ಲಲ್ಲಿ, ಸರ್ಕಾರಿ ಸಭೆ-ಸಮಿತಿಗಳಲ್ಲಿ, ಹೊಲ-ಕಾರ್ಖಾನಗಳಲ್ಲಿ, ಪಕ್ಷಗಳ ಕಚೇರಿ-ಸಭೆಗಳಲ್ಲಿ, ಪಾರ್ಲಿಮೆಂಟಿನಲ್ಲಿ, ಚುನಾವಣೆ ಪ್ರಚಾರಗಳಲ್ಲಿ, ಬೀದಿ-ಬೀದಿಗಳಲ್ಲಿ ಕೇಳಿ ಬರುತ್ತಿವೆ.

ಇದನ್ನು ಬೆಳವಣಿಗೆಯ ಹಾದಿಯ ಚರ್ಚ ಎನ್ನಬಹುದು. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ನಡೆಯುತ್ತಿದೆ. ಇಂತಹ ಚರ್ಚಗಳಲ್ಲಿ ಹಲವನ್ನು ನಾವೆಲ್ಲಾ ಕೇಳಿದ್ದೇವೆ.

ಇಂತಹ ಚರ್ಚಗಳಲ್ಲಿ ಆಗಾಗ ಕೇಳಿ ಬರುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವೇ ಈ ಪುಸ್ತಕ. ಪ್ರಶ್ನೆ ಮತ್ತು ಉತ್ತರ ಎರಡೂ ಭಾರತದ ಬಹುಸಂಖ್ಯಾತ ಜನರನ್ನು ಗಮನದಲ್ಲಿಟ್ಟು ಕೊಡಲಾಗಿದೆ. ಓದಿನ ಅನುಕೂಲಕ್ಕಾಗಿ ಪ್ರಶ್ನೆ ಮತ್ತು ಉತ್ತರಗಳನ್ನು ಆರು ಅಧ್ಯಾಯಗಳಾಗಿ ಕೊಡಲಾಗಿದೆ. ಒಂದೇ ವಿಷಯಕ್ಕೆ ಸಂಬಂಧಿಸಿದವುಗಳನ್ನು ಒಂದು ಅಧ್ಯಾಯದೊಳಗೆ ಸಂಗ್ರಹಿಸಲಾಗಿದೆ.

ಲೇಖಕ ಶರತ್ಚಂದ್ರ ಅವರು ಪುಸ್ತಕದ ಪ್ರಸ್ತಾವನೆಯಲ್ಲಿ ಈ ಪುಸ್ತಕದ ಬಗ್ಗೆ ವಿವರಿಸುತ್ತಾ “ಈ ಪುಸ್ತಕ ಭಾರತದ ಬೆಳವಣಿಗೆಯ ಹಾದಿಯ ಚರ್ಚಗೆ ಒಂದು ಕಿರುಕಾಣಿಕೆ. ಈ ಪುಸ್ತಕವನ್ನು ಬೆಳವಣಿಗೆಯ ಹಾದಿಯ ಚರ್ಚಯಲ್ಲಿ ಆಸಕ್ತಿ ಇರುವ ಎಲ್ಲರೂ ಸ್ವಾಗತಿಸುತ್ತಾರೆ ಎಂದು ಆಶಿಸಲಾಗಿದೆ. ಆಸಕ್ತರ ಮೂಲಕ ಈ ಚರ್ಚ ಭಾರತದ ಬಹುಸಂಖ್ಯಾತ ಜನರನ್ನೂ ತಲುಪಲಿ ಎಂಬುದು ಲೇಖಕನ ಹಾರೈಕೆ.” ಎಂದಿದ್ದಾರೆ.

ಪುಸ್ತಕದ ಅಂತ್ಯಪುಟದಲ್ಲಿ ತಮ್ಮ ಹರೆಯದಲ್ಲಿ ಜನಪ್ರಿಯವಾಗಿದ್ದ ಗೋಪಾಲಕೃಷ್ಣ ಅಡಿಗರ “ಕಟ್ಟುವೆವು ನಾವು” ಕವನವನ್ನು ಕೊಟ್ಟು ಓದುಗರಿಗೆ ಹೊಸ ನಾಡನ್ನು ಕಟ್ಟುವುದಕ್ಕೆ ಆಹ್ವಾನವನ್ನೂ ಕೊಟ್ಟಿದ್ದಾರೆ.

ಲೇಖಕರೇ ಹೇಳಿದಂತೆ ಇದರ ಉಪಯೋಗವನ್ನು ಎಲ್ಲಾ ಪ್ರಗತಿಪರರು ಪಡೆಯಲಿ. ( ಪುಸ್ತಕ ಇಂಗ್ಲೀಷ್ ನಲ್ಲೂ ಲಭ್ಯವಿದೆ)

ವಿಶಾಲಮತಿ

ಶೀರ್ಷಿಕೆ : ಭಾರತದ ಬೆಳವಣಿಗೆಯ ಹಾದಿ – ನೂರೆಂಟು ಪ್ರಶ್ನೆಗಳು ಲೇಖಕರು : ಶರತ್ ಚಂದ್ರ ಪ್ರಕಾಶಕರು : ಕ್ರಿಯಾ ಪ್ರಕಾಶನ ಪುಟಗಳು :96 ಬೆಲೆ:ರೂ.55/-