ದುರಂತವನ್ನು ರೋಚಕಗೊಳಿಸುವ ಕತೆಯಲ್ಲ

scan0008

2006ರ ಸಪ್ಟೆಂಬರ‍್ 29ರಂದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಭೋತ್ಮಾಂಗೆ ಮತ್ತವರ ಮಗಳು ಪ್ರಿಯಾಂಕ ಭೋತ್ಮಾಂಗೆಯವರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ ಸತತವಾಗಿ ಅತ್ಯಾಚಾರ ನಡೆಸಿ ಕೊಲ್ಲಲಾಯಿತು. ಸುರೇಖಾರ ಮಕ್ಕಳಾದ ರೋಷನ್ ಮತ್ತು ಸುಧೀರ‍್ ರನ್ನು ಕೊಚ್ಚಿ ಕೊಲ್ಲಲಾಯಿತು. ಈ ಭೀಕರ ಹತ್ಯಾಕಾಂಡದಲ್ಲಿ ಇಡೀ ಹಳ್ಳಿಯೇ ತೊಡಗಿಕೊಂಡಿತ್ತು. ಭೋತ್ಮಾಂಗೆಗಳು ದಲಿತರಾಗಿದ್ದರು. ಭೋತ್ಮಾಂಗೆಗಳನ್ನು ಈಗ ಮರೆತುಬಿಡಲಾಗಿದೆ. ಏಕೆಂದರೆ, ಹೇಗಿದ್ದರೂ ಈ ದೇಶದಲ್ಲಿ ದಿನಕ್ಕೆರಡು ದಲಿತರ ಕೊಲೆಯಾಗುತ್ತಲೇ ಇದೆ.
ಡಾ. ಆನಂದ್ ತೇಲ್ ತುಂಬ್ಡೆಯವರು ಸ್ವಾತಂತ್ರೋತ್ತರ ಭಾರತದ ಅತ್ಯಂತ ಹೀನಾಯ ಜಾತಿ ದೌರ್ಜನ್ಯವೊಂದನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ಮತ್ತು ಹೇಗೆ ನಮ್ಮ ಸುತ್ತ ಮುತ್ತ ಸದಾ ಖೈರ್ಲಾಂಜಿಗಳು ಇದ್ದೇ ಇವೆಯೆಂದು ತಿಳಿಸಿಕೊಟ್ಟಿದ್ದಾರೆ.
ಆನಂದ್ ತೇಲ್ ತುಂಬ್ಡೆಯವರ ವಿಶ್ಲೇಷಣೆ ನಮ್ಮ ಸಮಾಜದ ಹೃದಯಕ್ಕೆ ಗ್ಯಾಂಗ್ರೀನ್ ಹಿಡಿದಿರುವುದನ್ನು ಎತ್ತಿತೋರಿಸುತ್ತದೆ. ಆನಂದರ ಪುಸ್ತಕ ಈ ಹತ್ಯೆಯು ಯಾವ ಸಾಮಾಜಿಕ ಸಂದರ್ಭದೊಳಗೆ ಸಂಭವಿಸಿತೆಂಬ ವಿಶ್ಲೇಷಣೆಯನ್ನು ಒದಗಿಸುವುದಲ್ಲದೆ, ಯಾವ ರೀತಿಯಲ್ಲಿ ಸಾಮಾಜಿಕ, ರಾಜಕೀಯ ಮತ್ತು ಪ್ರಭುತ್ವ ಯಂತ್ರಾಂಗಗಳು, ಪೋಲೀಸರು, ಸಮೂಹ ಮಾದ್ಯಮಗಳು ಮತ್ತು ನ್ಯಾಯಾಂಗಗಳು ಎಲ್ಲವೂ ಒಂದಾಗಿ ಇಂಥ ದೌರ್ಜನ್ಯಗಳು ಸಂಭವಿಸುವಂಥಾ ವಾತಾವರಣವನ್ನೂ ಸೃಷ್ಟಿಸಿದವು ಎಂಬುದನ್ನೂ ಮತ್ತು ಅನಂತರ ಹೇಗೆ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದವು ಎಂಬುದನ್ನೂ ವಿವರಿಸುತ್ತದೆ. ಇದು ಅಳಿದುಳಿದ ಊಳಿಗಮಾನ್ಯ ವ್ಯವಸ್ಥೆಯ ಕೊನೆಯ ದಿನಗಳ ಬಗೆಗಿನ ಪುಸ್ತಕವಲ್ಲ. ಬದಲಿಗೆ ನಮ್ಮ ದೇಶದಲ್ಲಿ ಆಧುನಿಕತೆಗೆ ಏನರ್ಥ ಎಂಬುದರ ಬಗೆಗಿನ ಪುಸ್ತಕ ಎನ್ನುತ್ತಾರೆ ಅರುಂಧತಿ ರಾಯ್
ಪುಸ್ತಕದ ಬೆನ್ನುಡಿಯಿಂದ
ತೇಲ್ತುಂಬ್ಡೆಯವರ ಅಧ್ಯಯನ ಸಮಗ್ರವಾದದ್ದು; ಅವರು ದುರಂತವನ್ನು ರೋಚಕಗೊಳಿಸುವುದಿಲ್ಲ. ಆಧುನಿಕತೆ ಮತ್ತು ಜಾಗತೀಕರಣವು ಅಬಲರಲ್ಲಿ ಯಾವುದಾದರೂ ನಿರೀಕ್ಷೆಯನ್ನು ತುಂಬಿದೆಯೇ ಎಂದು ಈ ಪುಸ್ತಕ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ.
ಎನ್ನುತ್ತದೆ ದಿ ಟೆಲಿಗ್ರಾಫ್ ಪತ್ರಿಕೆ
ಶೀರ್ಷಿಕೆ: ಖೆರ್ಲಾಂಜಿ  ಲೇಖಕರು:ಆನಂದ್ ತೇಲ್ ತುಂಬ್ಡೆ. ಅನುವಾದ ಸಂಪಾದನೆ:ಶಿವಸುಂದರ‍್ ಪ್ರಕಾಶನ:ಲಂಕೇಶ್ ಪ್ರಕಾಶನ ಪುಟ:277 ಬೆಲೆ:ರೂ.200/-