ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ – ಸಂಶೋಧನಾ ಲೇಖನ ಸಂಕಲನ

ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ – ಸಂಶೋಧನಾ ಲೇಖನಗಳನ್ನೊಳಗೊಂಡ ಈ ಕೃತಿಯನ್ನು ವಸು ಎಂ.ವಿ.ಯವರು ಸಂಪಾದಿಸಿದ್ದಾರೆ. ಅಶ್ವತ್ಥನಾರಾಯಣ, ಉಷಾದೇವಿ ಎಂ.ವಿ., ಶಶಿಧರ‍್ ಎಂ. ಸಂಪಾದಕ ಬಳಗದಲ್ಲಿದ್ದಾರೆ.

ಈ ಕೃತಿಯ 30 ಲೇಖನಗಳಲ್ಲಿ ಒಂದೊಂದು ಲೇಖನವೂ ಕರ್ನಾಟಕದಲ್ಲಿ ಇತಿಹಾಸ ಸಂಶೋಧನೆಯ ಒಂದೊಂದು ಸವಾಲನ್ನು ಪ್ರತಿನಿಧಿಸುತ್ತದೆ. ವಿಷಯ, ಆಕರ, ಒಳತೋಟಿಯಲ್ಲಿ ಹರಿಯುವ ಧೋರಣೆ, ಸಂಶೋಧಕರ ಹಿನ್ನೆಲೆ ಎಲ್ಲಕ್ಕೂ ಒಂದು ಅರ್ಥ ಕಾಣಿಸುತ್ತದೆ. ಲೇಖನಗಳ ಸಾಮ್ಯತೆಯ ಆಧಾರದ ಮೇಲೆ ಉಪಶೀರ್ಷಿಕೆಯೊಂದಿಗೆ ವಿಭಾಗಿಸಲಾಗಿದ್ದು `ಸಾಹಿತ್ಯದೊಳಗಣ ಚರಿತ್ರೆಭಾಗದ ಎಲ್ಲ ಲೇಖನಗಳು ಒಂದಲ್ಲ ಒಂದು ರೀತಿಯಲ್ಲಿ ಸಾಹಿತ್ಯದಲ್ಲಿ ಪ್ರವೇಶ ಪಡೆದುಕೊಳ್ಳುತ್ತಿವೆ. `ಪ್ರಾಕ್ತನ ಶೋಧನದಡಿಯಲ್ಲಿ ಸಂಶೋಧನಾ ಸಿದ್ಧತೆ ಎದ್ದು ಕಾಣುತ್ತದೆ. `ಚರಿತ್ರೆ ಕಟ್ಟಿದ ಮೈಸೂರುವಿಭಾಗದಲ್ಲಿ ಹೆಚ್ಚಿನ ಲೇಖನಗಳು ಸೇರಿದ್ದು `ಹೆಣ್ಣು ಕಂಡ ನೆಲೆಗಳುಭಾಗದಲ್ಲಿ ಕಾಣುವ ಮೂರು ಲೇಖನಗಳು ಹೆಣ್ಣಿಗೆ ಚರಿತ್ರೆ ಕಟ್ಟುವಾಗ ದಕ್ಕಬಹುದಾದ ಮೂರು ಭಿನ್ನ ಹಾದಿಗಳಾಗಿವೆ. `ಹೊಸ ಪ್ರಶ್ನೆಗಳು ವಿಭಾಗದ ಲೇಖನಗಳು ಐಡೆಂಟಿಟಿಯ ವಿಚಾರಗಳನ್ನು ಪ್ರಮುಖವಾಗಿ ನೋಡುತ್ತಿವೆ. ಆಂಗ್ಲದಲ್ಲಿ ಕಟ್ಟಿದ ಚರಿತ್ರೆ-ಕರ್ನಾಟಕದ ವಿಚಾರವನ್ನು ಇಂಗ್ಲಿಷ್ ನಲ್ಲಿ ಹೇಳುವ ಪ್ರಯತ್ನವಾಗಿದ್ದು, ಹಲವಾರು ವಿದ್ವಾಂಸರು, ಸಂಶೋಧಕರು ಈ ಕೃತಿಗಾಗಿ ಕೆಲಸ ಮಾಡಿದ್ದು ಇದೊಂದು ಉತ್ತಮ ಗ್ರಂಥವಾಗಿದೆ.

ಶೀರ್ಷಿಕೆ: ಕನ್ನಡದೊಳ್ ಭಾವಿಸಿದ ಜನಪದಂ ಸಂಪಾದಕರು:ಡಾ. ವಸು ಎಂ.ವಿ. ಪ್ರಕಟಣೆ:ಚಿಂತನ ಪುಸ್ತಕ ಪುಟ:440 ಬೆಲೆ:ರೂ.375/-

ಕೃಪೆ:ಸಂಯುಕ್ತ ಕರ್ನಾಟಕ

 

Advertisements

ಸಂಗಾತಿ – ಕವನ ಸಂಕಲನ

scan0017-1

ಈ ಕವನ ಸಂಕಲನದಲ್ಲಿ 106 ಕವಿತೆಗಳಿವೆ. ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯನ್ನೇ ಬಳಸಿ ಶಿಕ್ಷಣ, ಸಂಸ್ಕಾರ, ಪರಿಸರ, ನೈತಿಕತೆ, ಸಾಮಾಜಿಕ ಕಳಕಳಿ, ಪ್ರೇಮ, ತ್ಯಾಗ ಮುಂತಾದ ಮೌಲ್ಯಗಳನ್ನು ಸಾರುವ ನಿಟ್ಟಿನಲ್ಲಿ ಕವನಗಳನ್ನು ರಚಿಸಿದ್ದಾರೆ. ಕವಿತೆಗಳಲ್ಲಿ ವೈವಿಧ್ಯತೆಯಿದೆ. ಕವಿಗೆ ಸಂಗೀತದ ಲಯದ ಜ್ಞಾನವಿರುವುದರಿಂದ ಇಲ್ಲಿನ ಬಹುಪಾಲು ಕವಿತೆಗಳು ಹಾಡಲು ಯೋಗ್ಯವಾಗಿವೆ. ಕವಿತೆಗಳ ಸಂಯೋಜನೆಯನ್ನು ರಾಗಕ್ಕೆ ಹೊಂದುವಂತೆ ರಚಿಸಲಾಗಿದೆ. ಶೀರ್ಷಿಕೆ: ಸಂಗಾತಿ ಲೇಖಕರು: ಶಂಕರ ಎಸ್. ಲಮಾಣಿ ಪ್ರಕಾಶಕರು: ಶ್ರೀಲಮಾಣಿ ಪ್ರಕಾಶನ ಜಮಖಂಡಿ ಪುಟ: 132 ಬೆಲೆ:ರೂ. 120/-

ಕೃಪೆ : ಸಂಯುಕ್ತ ಕರ್ನಾಟಕ

ಜಾಗತೀಕರಣ ಮತ್ತು ಗ್ರಾಮ ಭಾರತ

scan0014-1

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಲೇಖಕರು ಡಾಕ್ಟರೇಟ್ ಪದವಿಗಾಗಿ ಸಲ್ಲಿಸಿದ ಪ್ರೌಢ ಪ್ರಬಂಧ ಈಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ಇಲ್ಲಿನ ಕೆಲವು ಲೇಖನಗಳು ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜಾಗತೀಕರಣದ ಹಲವು ಮಗ್ಗಲುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಗ್ರಾಮ ಭಾರತದ ಮೇಲೆ ಜಾಗತೀಕರಣದ ಪ್ರಭಾವ ಕುರಿತು ಚರ್ಚಿಸಿದ್ದಾರೆ.

ದೇಶದ ಬೃಹತ್ ಮಾನವ ಸಂಪನ್ಮೂಲವನ್ನು ಶಿಕ್ಷಣ, ಆರೋಗ್ಯ, ನೀಡಿ ಸದುಪಯೋಗಪಡಿಸಿಕೊಂಡರೆ ಮಾತ್ರ ಜಾಗತೀಕರಣದ ಲಾಭ ಭಾರತಕ್ಕೆ ಆಗಬಹುದು. ಈ ಪ್ರಕ್ರಿಯೆಯಲ್ಲಿ ಭಾರತ ಎಚ್ಚರದಿಂದ ಹೆಜ್ಜೆ ಇಡಬೇಕಾಗುವುದು ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.

ಯುವಶಕ್ತಿಯ ಸದ್ಬಳಕೆ, ಪ್ರಾಕೃತಿಕ ಸಂಪತ್ತಿನ ಮಿತಬಳಕೆ, ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ, ರಾಜಕೀಯ ಸ್ಥಿರತೆಯನ್ನು ಹೊಂದಿ ಮೇಲಿನ ಅಂಶಗಳನ್ನು ಬಳಸಿಕೊಂಡು ಜಾಗತೀಕರಣವನ್ನು ಸ್ವಾಗತಿಸಬೇಕೆಂದು ಲೇಖಕರ ಅನಿಸಿಕೆಯಾಗಿದೆ.

ಧೀರ್ಘ ಪ್ರಸ್ತಾವನೆ, ಮುನ್ನುಡಿಯೊಂದಿಗೆ ಪುಸ್ತಕ ಬಹಳಷ್ಟು ಸಾಧ್ಯತೆಗಳನ್ನು ಮುಂದಿಡುತ್ತದೆ.

ಶೀರ್ಷಿಕೆ:ಜಾಗತೀಕರಣ ಮತ್ತು ಗ್ರಾಮ ಭಾರತ ಲೇಖಕರು:ಡಾ.ಎನ್.ಜಗದೀಶಕೊಪ್ಪ ಪ್ರಕಾಶಕರು:ಸಿಂಚನ ಗ್ರಂಥಮಾಲೆ ಹಾವೇರಿ ಪುಟ:312 ಬೆಲೆ:ರೂ.160/-

ಕೃಪೆ : ಸಂಯುಕ್ತ ಕರ್ನಾಟಕ