ಐವರು ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

oora-olagana-bayalu

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ಡಾ.ಶಶಿಕಲಾ ಮೋಳ್ದಿ, ಡಾ.ಗುರುಮೂರ್ತಿ ಪೆಂಡಕೂರು, ಪ್ರೊ.ಕಿ.ರಂ.ನಾಗರಾಜ್, ಡಾ.ಪಿ.ಕೆ.ರಾಜಶೇಖರ್ ಮತ್ತು ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪುಸ್ತಕ ಪ್ರಶಸ್ತಿ ಪುರಸ್ಕೃತರ ವಿವರ: ಕಾವ್ಯ- ಕರ್ಣರಾಗ (ಡಾ.ಎಲ್.ಹನುಮಂತಯ್ಯ), ಕಾದಂಬರಿ- ಉಲ್ಲಂಘನೆ (ಡಾ.ನಾ.ಮೊಗಸಾಲೆ), ಸಣ್ಣಕತೆ- ಊರ ಒಳಗಣ ಬಯಲು (ಡಾ.ವಿನಯಾ) ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ ನಾಟಕ- ಅಲ್ಲಮನ ಬಯಲಾಟ (ಲಕ್ಷ್ಮೀಪತಿ ಕೋಲಾರ), ಲಲಿತ ಪ್ರಬಂಧ- ರಾಗಿಮುದ್ದೆ (ರಘುನಾಥ ಚ.ಹ.), ಪ್ರವಾಸ ಸಾಹಿತ್ಯ- ಪಶ್ಚಿಮ ಮುಖಿ (ಟಿ.ಆರ್.ಅನಂತರಾಮು), ಜೀವನ ಚರಿತ್ರೆ/ಆತ್ಮಕಥನ- ಯಾರು ನಾನು?-ಜೀವನ ಕಥನ (ಫ.ಶಿ.ಭಾಂಡಗೆ).ಸಾಹಿತ್ಯ ವಿಮರ್ಶೆ- ತಕರಾರು (ಡಾ.ಮೊಗಳ್ಳಿ ಗಣೇಶ್), ಗ್ರಂಥ ಸಂಪಾದನೆ- ಕುಮಾರವ್ಯಾಸ ಭಾರತ (ಸಂಪಾದಕ- ಅ.ರಾ.ಸೇತುರಾಮರಾವ್), ಮಕ್ಕಳ ಸಾಹಿತ್ಯ- ಪದ್ಯದ ಮರ (ಕೃಷ್ಣಮೂರ್ತಿ ಬಿಳಿಗೆರೆ), ವಿಜ್ಞಾನ ಸಾಹಿತ್ಯ- ಕಲ್ಪವೃಕ್ಷದ ಜಾಡು ಹಿಡಿದು (ಡಾ.ಎಚ್.ಆರ್.ಕೃಷ್ಣಮೂರ್ತಿ), ಮಾನವಿಕ- ಒಡಲ ತುಡಿತಕ್ಕೆ ಕೇಡು (ಮಂಜುನಾಥ ಅದ್ದೆ).

ಸಂಶೋಧನೆ- ನೂರೊಂದು ಬರಹ (ಡಾ.ವೀರಣ್ಣ ರಾಜೂರ), ಅನುವಾದ (ಸೃಜನಶೀಲ)- ನಾನು ಅವನಲ್ಲ… ಅವಳು…! (ಡಾ.ತಮಿಳ್ ಸೆಲ್ವಿ), ಅನುವಾದ (ಸೃಜನೇತರ)- ಪಾಪ ನಿವೇದನೆ (ಡಾ.ಬಂಜಗೆರೆ ಜಯಪ್ರಕಾಶ್), ಸಂಕೀರ್ಣ- ಪರಿಭಾಷೆ (ಡಾ.ಮಾಧವ ಪೆರಾಜೆ) ಮತ್ತು ಲೇಖಕರ ಮೊದಲ ಕೃತಿ- ಕಡಲಿಗೆ ಕಳಿಸಿದ ದೀಪ ಕಡಲಿಗೆ ಕಳಿಸಿದ ದೀಪ (ಟಿ.ಯಲ್ಲಪ್ಪ).

– ಪ್ರಜಾವಾಣಿ ವಾರ್ತೆ