ಮೈಸೂರು ದಸರ! ಎಷ್ಟೊಂದು ಸುಂದರ!!!

ಈ ಪುಸ್ತಕದಲ್ಲಿ ವಿಜಯನಗರದಿಂದ ಮೈಸೂರಿನ ಒಡೆಯರು ದಸರಾವನ್ನು ಹೇಗೆ ಮುಂದುವರಿಸಿಕೊಂಡು ಬಂದರು. ರಾಜ್ಯದ ಇತರೆಡೆಗಳಲ್ಲಿ ಎಲ್ಲೆಲ್ಲಿ ದಸರಾ ಆಚರಣೆಯಿದೆ. ಮೈಸೂರಿನ ಸುತ್ತಮುತ್ತಲಿನ ಪ್ರಸಿದ್ಧ ಪ್ರದೇಶಗಳಾವುವು, ಮೈಸೂರು ಒಡೆಯರ ಸಾಧನೆ, ಆಳ್ವಿಕೆ, ಮೈಸೂರು ಅರಮನೆ, ಚಿನ್ನದ ಸಿಂಹಾಸನ, ಜಂಬೂಸವಾರಿ ಹೀಗೆ ಹಲವಾರು ಮಾಹಿತಿಗಳನ್ನೊಳಗೊಂಡಿದೆ. ಇದು ಈ ಪುಸ್ತಕದ ಸ್ವರೂಪ.

ಶೀರ್ಷಿಕೆ: ಮೈಸೂರು ದಸರಾ ಸಂಪಾದಕರು: ಗೌರಿ ಸುಂದರ‍್ ಪ್ರಕಾಶಕರು: ಸುಂದರ ಪ್ರಕಾಶನ ಪುಟ:313 ಬೆಲೆ:ರೂ.395/-

ಮೂರ್ತಿಯವರ ಮೊನಚು

ನಾಡಿನ ಹಿರಿಯರು, ರಂಗಕರ್ಮಿಗಳು ಎಂದು ಖ್ಯಾತರಾದವರು ಎ.ಎಸ್.ಮೂರ್ತಿ. ಮೂರ್ತಿ ವಯಸ್ಸಿನಲ್ಲಿ ಹಿರಿಯರಾದರೂ ಕೀ ರ್ತಿಯೂ ಅಷ್ಟೇ ದೊಡ್ಡದು.

`ಒಂದು ವಿಧದಲ್ಲಿ ನಾಟಕವನ್ನು ಅವರು ಬಾಳಿನ ಅತ್ಯಂತ ಪ್ರಮುಖ ಕಾರ್ಯ ಎಂದು ತೀರ್ಮಾ ನಿಸಿಬಿಟ್ಟಿದ್ದರು. ಒಂದು ವಿಧದಲ್ಲಿ ಅದು ಅವರಿಗೆ ರಕ್ತಗತವಾಗಿ ಬಂದ ಆಸಕ್ತಿ. ಅವರ ತಂದೆ ಅ.ನ.ಸುಬ್ಬರಾಯರು ಸ್ವತಃ ನಾಟಕಕಾರರೂ ರಂಗಕರ್ಮಿಗಳೂ ಆಗಿದ್ದರು. ಅವರಿಗೆ ಕಲೆಯೇ ಜೀವನವಾಗಿತ್ತು’.

`ಕಲಾಮಂದಿರದ ಆಶ್ರಯದಲ್ಲಿ ಎ.ಎಸ್.ಮೂರ್ತಿಯವರು ಎಷ್ಟೊಂದು ಜನ ಯುವಕ ಯುವತಿಯರನ್ನು ಅಭಿನಯ ಕಲೆಯಲ್ಲಿ ತಯಾರು ಮಾಡಿದರು ಎಂಬುದೇ ಆಶ್ಚರ್ಯಕರವಾಗದ ವಿಷಯ’ ಎನ್ನುತ್ತಾರೆ ಜಿ.ವೆಂಕಟಸುಬ್ಬಯ್ಯ. ಎ.ಎಸ್.ಮೂರ್ತಿಯವರ ಕಲೆಯ ಕುರಿತು ಎಲ್ಲರೂ ಅಚ್ಚರಿಗೊಳ್ಳುವುದು ಅತ್ಯಂತ ಸಹಜ. ಅದರಲ್ಲೂ `ದೇಸಿ v/s ಪರದೇಸಿ’ ಕಿರುನಾಟಕ ಮೂರ್ತಿಯವರ ವಿಡಂಬನೆಯ ಮೊನಚನ್ನು ತೋರಿಸುತ್ತದೆ. ಪರದೇಸೀ ಮೋಹ, ಪರಭಾಷೆಯ ಮೋಹ, ಪರ ಸಂಸ್ಕೃತಿಯ ಆಕರ್ಷಣೆ ಇವೆಲ್ಲವನ್ನೂ ಹಿರಿಯರಾದ ಮೂರ್ತಯವರು ಕೆತ್ತುವ ರೀತಿಯಿದೆಯಲ್ಲ! ಅವರಿಗೆ ಅವರೇ ಸಾಟಿ. `ನಟರ ಹೆಸರುಗಳಲ್ಲಿ ಕತಿ-ಛತ್ರಿ, ಬಂಗಾರಿ-ಸಿಂಗಾರಿ ಗಳಲ್ಲೂ ಕೂಡಾ ವಿಡಂಬನೆಯಿದೆ. ಕೆಂಡೇಗೌಡ-ಚಂಡೇಗೌಡರ ಜತೆ ಕೂಡಾ ಹಾಗೆಯೇ’ ಎನ್ನುತ್ತಾರೆ ವೆಂಕಟಸುಬ್ಬಯ್ಯ.

ಶೀರ್ಷಿಕೆ:ದೇಸಿ v/s ಪರದೇಸಿ ಲೇಖಕರು:ಎ.ಎಸ್.ಮೂರ್ತಿ ಪ್ರಕಾಶಕರು : ಸುಂದರ ಪ್ರಕಾಶನ ಪುಟಗಳು:38 ಬೆಲೆ: ರೂ.30/-

ಕೃಪೆ : ಕನ್ನಡ ಪ್ರಭ