ಉರುಳುವ ಕಲ್ಲಿನ ನೆನಪಿನ ಸುರುಳಿ

ಸ್ವಾತಂತ್ರ್ಯಪೂರ್ವ ಮತ್ತು ನಂತರದ ಕಾಲಘಟ್ಟಗಳಲ್ಲಿ ದೇಶದ ಮಹಿಳಾ ಚಳವಳಿಯ ಸ್ಥಿತ್ಯಂತರಗಳಿಗೆ ನೇರವಾಗಿ ಸಾಕ್ಷಿಯಾದವರಲ್ಲಿ ವೀಣಾ ಮಜುಂದಾರ್ ಪ್ರಮುಖರು. ಸ್ವಾತಂತ್ರ್ಯ ಚಳವಳಿಯಲ್ಲಿ ಗಳಿಸಿದ ಹಕ್ಕುಗಳನ್ನು ಗಟ್ಟಿಗೊಳಿಸಲು ನಡೆದ ಭಾರತದ ಮಹಿಳಾ ಚಳವಳಿಯ ಭಾಗವಾಗಿ ಇದ್ದುಕೊಂಡೇ ಮಹಿಳಾ ಅಧ್ಯಯನದ ಮೂಲಸೆಲೆಯಾಗಿ ಗುರುತಿಸಿಕೊಂಡವರು ಅವರು. ಪಶ್ಚಿಮ ಬಂಗಾಳದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ರಾಜ್ಯಶಾಸ್ತ್ರದ ಅಧ್ಯಾಪಕಿಯಾಗಿ ವೃತ್ತಿಜೀವನ ಆರಂಭಿಸಿ, ಯುಜಿಸಿ ಆಡಳಿತ ಮಂಡಳಿಯಲ್ಲಿ ಉನ್ನತ ಶಿಕ್ಷಣದ ಯೋಜನೆಗಳಿಗೆ ಸಾಂಸ್ಥಿಕ ನೀತಿ ನಿಯಮ ರೂಪಿಸುವ ಅಧಿಕಾರಶಾಹಿಯ ಭಾಗವಾಗುವವರೆಗಿನ ಅವರ ಬದುಕೇ ಮಹಿಳಾ ಅಧ್ಯಯನಾಸಕ್ತರಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ.

ಉರುಳುವ ಕಲ್ಲಿನ ನೆನಪಿನ ಸುರುಳಿ ಪುಸ್ತಕ ಮುಖಪುಟ

‘ಭಾರತದ ಮಹಿಳಾ ಚಳವಳಿಯ ದಾಖಲಾತಿದಾರಳು ನಾನು’ ಎಂದು ತಮ್ಮನ್ನು ಕರೆದುಕೊಳ್ಳುವ ವೀಣಾ, ತಮ್ಮ ಬದುಕಿನ ಪುಟಗಳನ್ನು ದಾಖಲಿಸಲು ಮನಸ್ಸು ಮಾಡಿದ್ದು ಮಾತ್ರ ಬದುಕಿನ ಇಳಿಸಂಜೆಯಲ್ಲಿ, ಒಂದು ದಶಕದ ಹಿಂದೆ, 86ನೇ ವಯಸ್ಸಿನಲ್ಲಿ ನಿಧನರಾದ ಅವರು, ಅದಕ್ಕಿಂತ ಕೇವಲ 3 ವರ್ಷಗಳ ಹಿಂದಷ್ಟೇ ಹೊರತಂದ ಆತ್ಮಕಥನ ‘ಮೆಮೊರೀಸ್ ಆಫ್ ಎ ರೋಲಿಂಗ್ ಸ್ಟೋನ್’. ಅದನ್ನೀಗ ‘ಉರುಳುವ ಕಲ್ಲಿನ ನೆನಪಿನ ಸುರುಳಿ’ ಎಂಬ ಹೆಸರಿನಲ್ಲಿ * ಕನ್ನಡಕ್ಕೆ ತಂದಿದ್ದಾರೆ ಸಾಹಿತಿ ಡಾ. ಎನ್. ಗಾಯತ್ರಿ,

ದಶಕಗಳ ಹೋರಾಟದ ಬಳಿಕವೂ ಸಮಾನತೆ ಎಂಬುದು ಮರೀಚಿಕೆಯೇ ಆಗಿರುವ ಈ ಹೊತ್ತಿನಲ್ಲಿ, ಅಂತಹದ್ದೊಂದು ಹೋರಾಟಕ್ಕೆ ಪುನರ್ ಚಾಲನೆ ನೀಡುವ ದಿಸೆಯಲ್ಲಿ ಈ ಪುಸ್ತಕದ ಓದು ಅರ್ಥಪೂರ್ಣ ಎನಿಸುತ್ತದೆ. ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಇರುವ ದಾಖಲೆಗಳ ಕೊರತೆಯನ್ನು ನೀಗಿಸುವ ದೃಷ್ಟಿಯಿಂದಲೂ ಈ ಪುಸ್ತಕ ಸಕಾಲಿಕವಾಗಿದೆ.

ಕೃತಿ: ಉರುಳುವ ಕಲ್ಲಿನ ನೆನಪಿನ ಸುರುಳಿ

ಲೇ: ವೀಣಾ ಮಜುಂದಾರ್

ಅನುವಾದ: ಡಾ.ಎನ್.‌ ಗಾಯಿತ್ರಿ.

ಪುಟ: 268

ಬೆಲೆ; 320/- ರೂ.

ಪ್ರಕಾಶನ: ಕ್ರಿಯಾ ಮಾಧ್ಯಮ ಪ್ರೈ.ಲಿ.

ಪುಸ್ತಕಗಳಿಗೆ ಸಂಪರ್ಕಿಸಿ ಫೋನ್: 9606016471 / 9606016472 / 9606016473

ಪ್ರಜಾವಾಣಿಯಲ್ಲಿನ ಪುಸ್ತಕ ವಿಮರ್ಶೆಗೆ ಲಿಂಕ್‌ ಕ್ಲಿಕ್‌ ಮಾಡಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: