ಜಾಗತೀಕರಣ ಐಡಿಯಾಲಜಿ ಮತ್ತು ಮಾನವ ಹಕ್ಕುಗಳು

ಜಾಗತೀಕರಣದ ಕರಾಳ ಸ್ವರೂಪವನ್ನು ಈ ಕೃತಿ ಗಂಭೀರವಾಗಿ, ಸಾಮಾಜಿಕ ಕಳಕಳಿಯೊಂದಿಗೆ ವಿಶ್ಲೇಷಿಸುತ್ತದೆ. ಯುದ್ಧ ಮಾಡದೆಯೇ ಜಗತ್ತಿನಾದ್ಯಂತ ಆರ್ಥಿಕ ಉದಾರೀಕರಣವನ್ನು ಅನುಸರಿಸಿ ದೇಶಿ ಮಾರುಕಟ್ಟೆಗಳನ್ನು ಜಾಗತೀಕರಣಗೊಳಿಸುವ ಪ್ರಕ್ರಿಯೆ ಇಂದು ತೀವ್ರವಾಗೇ ನಡೆಯುತ್ತಿದೆ. ಇದರ ಬೆನ್ನಿಗೆ ಕ್ರ್ರಿಯಾಶೀಲವಾಗಿರುವುದು ಜನಾಂಗ ವಿರೋಧಿ ನೀತಿ. ಬಹುಜನ ಹಿತಾಸಕ್ತಿಯನ್ನು ತುಳಿದು, ಅವರ ಶ್ರಮ-ಶಕ್ತಿಯ ಮೇಲೆ ಒಬ್ಬ ಬೆಳೆಯುವ ವ್ಯವಸ್ಥೆ. ಈ ಬಗೆಯ ಜಾಗತೀಕರಣದ ವಿವಿಧ ಮಜಲುಗಳನ್ನು ಈ ಕೃತಿ ವಸ್ತುನಿಷ್ಟವಾಗಿ ವಿಶ್ಲೇಷಿಸುತ್ತದೆ. ಕೃತಿಯ ಮೊದಲ ಭಾಗದಲ್ಲಿ ಜಾಗತೀಕರಣದ ಸ್ವರೂಪವನ್ನು – ಜಾಗತೀಕರಣ ಮತ್ತು ಹೊಸ ಆರ್ಥಿಕ ನೀತಿ, ಮುಕ್ತ ಮಾರುಕಟ್ಟೆ, ಜಾಗತೀಕರಣ ಮತ್ತು ಸಂಸ್ಕೃತಿಯ ಅನನ್ಯತೆ, ಸಾಮಾಜಿಕ ಚಳುವಳಿಗಳು, ಜಾಗತೀಕರಣ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಎರಡನೇ ಭಾಗದಲ್ಲಿ ಜಾಗತೀಕರಣದ ಜಗತ್ತಿನಲ್ಲಿ ದಲಿತರು, ಭೂ ಒಡೆತನದ ಹಕ್ಕು, ದುಡಿಮೆ, ಉದ್ಯೋಗ, ಆಹಾರ, ಶೈಕ್ಷಣಿಕ ವ್ಯವಸ್ಥೆ, ಆರೋಗ್ಯ, ನೀರು – ಮೊದಲಾದ ಸಾಮಾಜಿಕ ಅಂಗಗಳ ಮೇಲೆ ಜಾಗತೀಕರಣದ ಪರಿಣಾಮವನ್ನು ಚರ್ಚಿಸಲಾಗಿದೆ.

ಲೇಖಕರು : ಡಾ. ಡೋಮಿನಿಕ್ ಡಿ.

ಪ್ರಕಾಶಕರು : ಸಖಿ ಪ್ರಕಾಶನ

ಪುಟಗಳು : 13+177=190

ಬೆಲೆ: ರೂ. 170.00

ಕೃಪೆ : ಹೊಸತು