ಅಂಬೆಡ್ಕರ್

ಅಂಬೆಡ್ಕರ್ ಸಂವೇದನೆ

ಡಾ. ಅಂಬೇಡ್ಕರರ ತತ್ವ ಚಿಂತನೆಗಳ ಹಿನ್ನೆಲೆಯಲ್ಲಿ ಡಾ. ಎಚ್. ಟಿ. ಪೋತೆ ಅವರು ಬರೆದ 11 ಲೇಖನಗಳ ಸಂಕಲನ ಇದು. `ಅಂಬೇಡ್ಕರ್ : ಸಾಮಾಜಿಕ ಚಳುವಳಿ‘, `ಅಂಬೆಡ್ಕರ್ ಮತ್ತು ಮಹಿಳೆ‘, `ಅಂಬೆಡ್ಕರ್-ಗಾಂಧಿ:ಮುಖಾಮುಖಿ‘ … ಹೀಗೆ, ಇಲ್ಲಿನ ವಿಷಯಗಳು ತೆರೆದುಕೊಳ್ಳುತ್ತದೆ. ಡಾ. ಪೋತೆ ಅವರು ಬಾಬಾ ಸಾಹೇಬರನ್ನು ಮೈ-ಮನ ತುಂಬಾ ತುಂಬಿಕೊಂಡವರಂತೆ ಮಾತನಾಡುವುದು ಈ ಬರಹಗಳಲ್ಲಿ ಸುಲಭವಾಗಿ ಗಮನಕ್ಕೆ ಬರುತ್ತದೆ. ಬಹಳ ವೇಳೆ ಸಂಗತಿಗಳನ್ನು ತೀರಾ ಸರಳೀಕರಿಸಿದ ನೆಲೆಗೆ ಕೊಂಡೊಯ್ಯುವುದೂ ಇದೆ. ಒಬ್ಬ ಬರಹಗಾರ ವರ್ಷದಲ್ಲಿ ಎಷ್ಟು ಪುಸ್ತಕ ಬರೆದ ಎನ್ನುವುದಕ್ಕಿಂತ ಬರೆದದ್ದು ಎಷ್ಟು ಮೌಲಿಕ ಎಂಬುದೂ ಮುಖ್ಯ ಎಂಬುದನ್ನು ಮನಸ್ಸಿಗೆ ತಂದು ಕೊಂಡರೆ ಯಾವುದೇ ಲೇಖಕನಿಗೆ ಒಳ್ಳೆಯದು.

ಅಂಬೆಡ್ಕರ್ :ಸಾಂಸ್ಕೃತಿಕ ಸಂಘರ್ಷ

ಇದು ಗಂಭೀರವಾದ ಬರಹಗಳನ್ನೊಳಗೊಂಡ ಕೃತಿ. ಇದರಲ್ಲಿ ಸ್ವತಃ ಅಂಬೆಡ್ಕರ್ ಬರಹವೊಂದರ ಅನುವಾದವೂ ಸೇರಿದಂತೆ ಇಂತಹ ಹಲವು ಲೇಖಕರು ಬರೆದ ಅಥವಾ ಮೂಲವನ್ನು ಅನುವಾದಿಸಿದ ಒಟ್ಟು 16 ಲೇಖನಗಳು ಪ್ರಕಟಗೊಂಡಿವೆ. `ಶಾಪವಾಗಿ ಕಾಡಿದ ಜಾತಿಯ ಭೂತ‘, `ಶೌರ್ಯ ಮೆರೆದು ಮಡಿದ ಮಹಾನ್ ಯೋಧರು‘, `ಅಂಬೆಡ್ಕರ್: ಸ್ಪೂರ್ತಿಯಿಂದ ಪೂಜೆಯ ಕಡೆಗೆ‘, `ಬಾಬಾ ಸಾಹೇಬರ ಪ್ರಖರ ಆದ್ಯಾತ್ಮಿಕತೆ‘, `ನೈಜ ಅಂಬೇಡ್ಕರರ ಅನ್ವೇಷಣೆಯಲ್ಲಿ…‘, `ದಲಿತ ಪ್ರಜ್ಞೆ ಮತ್ತು ಕುಲ ಮೀಮಾಂಸೆ..ಇವು ಇಲ್ಲಿನ ಕೆಲವು ಲೇಖನಗಳು. ಈ ಶೀರ್ಷಿಕೆಗಳನ್ನು ಗಮನಿಸಿದರೆ ಈ ಪುಸ್ತಕದ ವಿಷಯಗಳ ಹರವು, ಅವುಗಳ ತಾತ್ವಿ ನೆಲೆಗಳ ಸಾಮಾನ್ಯ ತಿಳುವಳಿಕೆ ಆದೀತು. ಒಟ್ಟಾರೆ, ಇವೆಲ್ಲಾ ಅಂಬೇಡ್ಕರ್ ಕೇಂದ್ರಿತ ಚಿಂತನೆಗಳೇ ಆಗಿವೆ.

……

ವಿಚಾರ ವಿಮರ್ಶೆಯ ಇಂಥಾ ಪುಸ್ತಕಗಳಲ್ಲಿ ಅಕ್ಷರ/ವಾಕ್ಯ ದೋಷಗಳು ಇರಲೇಬಾರದು. ಅವು ಅರ್ಥ ಸಂದಿಗ್ಧತೆ, ಗ್ರಹಿಕೆಯಲ್ಲಿ ತೊಡಕುಂಟು ಮಾಡುತ್ತವೆ. ಹಾಗೆಯೇ, ಉದ್ಧರಣೆ ಚಿಹ್ನೆಗಳನ್ನು ಸರಿಯಾಗಿ ಬಳಸದಿದ್ದರೆ ಲೇಖಕರ ಅಭಿಪ್ರಾಯ ಯಾವುದು, ಅಂಬೇಡ್ಕರರ ಅಭಿಪ್ರಾಯ ಯಾವುದು ಎಂಬ ಗೊಂದಲ ಉಂಟಾಗುತ್ತದೆ. ಈ ಪುಸ್ತಕದಲ್ಲಿ ಇಂಥಾ ದೋಷಗಳು ಉದ್ದಕ್ಕೂ ಇವೆ. ಮುಖಪುಟವಷ್ಟೇ ಸುಂದರವಾಗಿದ್ದರೆ ಸಾಲದು; ಒಳಗೂ ಅಚ್ಚುಕಟ್ಟುತನ ಇರಬೇಕಾದುದು ಅತ್ಯಗತ್ಯ.

ಕೃಪೆ : ಕನ್ನಡ ಪ್ರಭಾ